ಈ ಬಾರಿ ಹೊಸ ವರ್ಷಕ್ಕೆ ನಟ ಹರೀಶ್ ರಾಜ್ ಅವರಿಗೆ ಚಿತ್ರಗಳ ಸುರಿಮಳೆ. ಇದೀಗ ಹರೀಶ್ ರಾಜ್ ಅವರ ಅಭಿನಯದ ಎರಡು ಚಿತ್ರಗಳ ಕುರಿತು ಒಳ್ಳೆಯ ಅಭಿಪ್ರಾಯಗಳು ಕೇಳಿ ಬಂದಿವೆ. ಮತ್ತೆ ಕೆಲವು ಆಫರ್ಗಳು ಅವರನ್ನು ಹುಡುಕಿಕೊಂಡು ಬಂದಿವೆ. ಹರೀಶ್ ರಾಜ್ ಅವರ ಬೆಂಗಳೂರ್ಡ್ ಹಾಗೂ ಸುಗ್ರೀವ ಜನವರಿಯಲ್ಲಿ ಬಿಡುಗಡೆಯಾಗಲಿವೆ. ಅಲ್ಲದೇ ತಳಿರು ತೊರಣ ಹಾಗೂ ನಾವು ನಮ್ಮ ಹೆಂಡತಿಯರು ಚಿತ್ರಗಳಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ಸದಾರೆ.
ತಳಿರು ತೋರಣ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರಿಗೆ ಹರೀಶ್ ರಾಜ್ ಜೊತೆಯಾಗಿದ್ದಾರೆ. ಈ ಹಿಂದೆ ಆ ಪಾತ್ರ ನಾಗಕಿರಣ್ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಆ ಪಾತ್ರಕ್ಕೀಗ ಹರೀಶ್ ರಾಜ್ ಬಂದಿದ್ದಾರೆ. ಯಕ್ಷಗಾನದ ಹುಡುಗರಿಬ್ಬರು ಸಿನಿಮಾದಲ್ಲಿ ಮಿಂಚಬೇಕೆಂದು ಬೆಂಗಳೂರಿಗೆ ಬಂದು ಅನುಭವಿಸುವ ಕಷ್ಟ ಸುಖಗಳನ್ನು ಚಿತ್ರ ರಸವತ್ತಾಗಿ ತೋರಿಸಲಿದೆ ಎನ್ನುತ್ತಾರೆ ಹರೀಶ್ ಖುಷಿಯಿಂದ.
ಸೀತಾರಾಮ ಕಾರಂತ ನಿರ್ದೇಶನದ ನಾವು ನಮ್ಮ ಹೆಂಡತಿಯರು ಚಿತ್ರದಲ್ಲೂ ಹರೀಶ್ ರಾಜ್ ಇದ್ದು ಇದರಲ್ಲಿ ನಾಲ್ವರು ಹುಡುಗರಿದ್ದು, ಹರೀಶ್ ಅವರದ್ದು ಪ್ರಧಾನ ಪಾತ್ರವಂತೆ. ಉಳಿದ ಮೂವರು ನಾಯಕ ಹಾಗೂ ನಾಯಕಿಯರ ಹುಡುಕಾಟ ನಡೆಯುತ್ತಿದೆ. ಜನವರಿ 27ಕ್ಕೆ ಈ ಚಿತ್ರ ಸೆಟ್ಟೇರಲಿದೆ.