ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಂಥ ಗಂಡ ಸಿಕ್ಕಿದ್ದು ಮೀನಾರ ಪುಣ್ಯವಂತೆ! (Meena | Hendtheer Darbaar | Ramesh Aravind)
ಸುದ್ದಿ/ಗಾಸಿಪ್
Bookmark and Share Feedback Print
 
Meena
WD
ಆಕರ್ಷಕ ಕಣ್ಣುಗಳ ಚೆಲುವೆ ಹಾಗೂ ಬಹುಭಾಷಾ ತಾರೆ ಮೀನಾ ಮತ್ತೆ ಬಣ್ಣ ಹಚ್ಚಿರುವುದು ಗೊತ್ತೇ ಇದೆ. ರಮೇಶ್ ಅರವಿಂದ್ ಜೊತೆಗೆ ಹೆಂಡ್ತೀರ್ ದರ್ಬಾರ್ ಚಿತ್ರದಲ್ಲಿ ನಟಿಸುತ್ತಿರುವ ಅವರು, ವಿವಾಹವಾದ ನಂತರ ನಟಿಸುತ್ತಿರುವ ಮೊದಲ ಚಿತ್ರವಾಗಿ ಇದು ಹೊರಹೊಮ್ಮಲಿದೆ.

ಸಾಮಾನ್ಯವಾಗಿ ನಾಯಕಿಯರು ಮದುವೆಯಾದ ಮೇಲೆ ನಟಿಸಬೇಕೊ ಬೇಡವೋ ಎಂಬ ಗೊಂದಲದಲ್ಲಿರುತ್ತಾರೆ. ಅಷ್ಟೇ ಅಲ್ಲ, ಮನೆಯಿಂದ ಪತಿಯ ಸಹಕಾರವೂ ನಟನೆಯ ವಿಚಾರದಲ್ಲಿ ಸಿಗೋದು ಅಷ್ಟಕ್ಕಷ್ಟೇ. ಸಾಕಷ್ಟು ಜನಪ್ರಿಯ ನಟಿಯರ ಗಂಡನೂ ನಟನಾಗಿದ್ದರೂ, ಗಂಡ ತನ್ನ ನಟನೆಯನ್ನು ಮುಂದುವರಿಸಿದರೂ, ನಟಿಯರು ಮಾತ್ರ ನಟನೆಯಿಂದ ನಿವೃತ್ತಿ ಪಡೆದುಕೊಳ್ಳುವುದು ಸಾಮಾನ್ಯ. ಇದಕ್ಕೆ ಚಿತ್ರರಂಗದ ಸಾಕಷ್ಟು ಉದಾರಹಣೆಗಳೇ ಇವೆ. ನಟಿ ಮೀನಾ ಕೂಡಾ ಇದೇ ಥರ ಇನ್ನು ಬಹುತೇಕ ಚಿತ್ರರಂಗದಿಂದ ದೂರ ಸರಿದಂತೆಯೇ ಎಂದೂ ಹಲವರು ಮಾತಾಡಿಕೊಂಡಿದ್ದರು. ಆದರೆ ಈ ಗುಸುಗುಸು ಮಾತುಗಳನ್ನೆಲ್ಲ ಮೀನಾರೇ ಸ್ವತಃ ಸುಳ್ಳಾಗಿಸಿದ್ದಾರೆ.

ಎಲ್ಲ ನಟಿಯರಿಗೆ ಮದುವೆಯ ನಂತರ ನಟಿಸಲೋ, ಬೇಡವೋ ಎಂಬ ಗೊಂದಲವಿದ್ದರೆ, ಮೀನಾ ಅವರಿಗೆ ಅಂತಹ ಗೊಂದಲಕ್ಕೆ ಅವಕಾಶವೇ ಸಿಗಲಿಲ್ಲವಂತೆ. ಯಾಕಂದರೆ, ಅವರ ಪತಿಯೇ, ನಟಿಸಲು ಬಯಕೆಯಿದ್ದರೆ ನಟಿಸು ನನ್ನದೇನೂ ಅಭ್ಯಂತರವಿಲ್ಲ ಎಂದು ಹೇಳಿದ್ದು ಮೀನಾಗೆ ಅಮೃತ ಕುಡಿದಷ್ಟು ಸಂತೋಷವಾಗಿದೆಯಂತೆ. ಅಂತ ಪತಿಯನ್ನು ಪಡೆಯಲು ಪುಣ್ಯ ಮಾಡಿರಬೇಕು ಎಂದೀಗ ಹಲವರು ಮಾತಾಡಿಕೊಳ್ಳುತ್ತಿದ್ದಾರೆ. ಮೀನಾ ಅವರಿಗೆ ತಮಿಳು, ತೆಲುಗು ಚಿತ್ರಗಳಲ್ಲಿಯೂ ಆಫರ್ ಬರುತ್ತಿವೆಯಂತೆ. ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿಯಾಗಿದೆ. ಇನ್ನು ಮುಂದೆ ಒಂದಾದ ಮೇಲೊಂದರಂತೆ ನಟಿಸುತ್ತೇನೆ ಎನ್ನುತ್ತಾರೆ ಮೀನಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೀನಾ, ಹೆಂಡ್ತೀರ್ ದರ್ಬಾರ್, ರಮೇಶ್ ಅರವಿಂದ್