ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಪಾಳಮೋಕ್ಷ ಪರಿಣಾಮ: ಐಂದ್ರಿತಾಗೆ ಸ್ತ್ರೀವಾದಿ ಪಾತ್ರಗಳ ಸುರಿಮಳೆ! (Aindrita Ray | Nagathihalli Chandrashekhar | Nooru Janmaku)
ಸುದ್ದಿ/ಗಾಸಿಪ್
Bookmark and Share Feedback Print
 
Aindrita Ray
MOKSHA
ಐಂದ್ರಿತಾ ರೇಗೆ ನಾಗತಿಹಳ್ಳಿ ಕಪಾಳಮೋಕ್ಷ ಪ್ರಕರಣದಿಂದ ನಂತರ ಅವಕಾಶಗಳೇನಾದರೂ ಕಡಿಮೆಯಾಗಿದೆಯಾ? ಹೀಗೊಂದು ಪ್ರಶ್ನೆಗೆ ಆಕೆ ಖಂಡಿತಾ ಇಲ್ಲ ಅಂತಾರೆ. ಹೌದು. ಐಂದ್ರಿತಾಗೆ ಸಿಕ್ಕಾಪಟ್ಟೆ ಆಫರ್ ಮೇಲೆ ಆಫರ್ ಬರುತ್ತಿದೆಯಂತೆ. ಕಪಾಳಮೋಕ್ಷದ ಪ್ರಕರಣದಿಂದ ಖಂಡಿತಾ ಇದರಲ್ಲಿ ಚೂರು ಕಡಿಮೆಯಾಗಿಲ್ಲ ಎನ್ನುತ್ತಾರೆ ಅವರು.

ನನಗೀಗ ವಿಶ್ರಾಂತಿಯ ಅಗತ್ಯವಿದೆ. ಆದರೆ, ಚಿತ್ರದ ಶೂಟಿಂಗ್, ಡೇಟ್ಸ್, ಕಾಸ್ಟ್ಯೂಮ್ ಮತ್ತಿತರ ವಿಚಾರಗಳಲ್ಲಿ ನಾನು ಗಮನ ಕೊಡುವ ಅಗತ್ಯವಿದೆ. ಇದೇ ಸಮಯ ಸಾಕಷ್ಟು ಆಫರ್‌ಗಳೂ ಬರುತ್ತಿವೆ. ಅದರಲ್ಲೂ ಹೆಚ್ಚಾಗಿ ಸ್ತ್ರೀವಾದಿ ಪಾತ್ರಗಳೇ ಹೆಚ್ಚಾಗಿ ಬರುತ್ತಿವೆಯಂತೆ!

ಈಗ ಧೂಳ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ. ಆದರೆ, ಅಲ್ಲೆಲ್ಲೂ ಕಪಾಳಮೋಕ್ಷ ಸಂಗತಿ ಬಗ್ಗೆ ಮಾತನಾಡಲು ಆಸ್ಪದ ನೀಡಿಲ್ಲ. ನಾನು ತುಂಬಾ ಪ್ರೊಫೆಷನಲ್ ಹುಡುಗಿ. ಫ್ರೊಫೆಷನಲ್ ಆಗಿಯೇ ಸೆಟ್ಟಿನಲ್ಲಿ ಬಿಹೇವ್ ಮಾಡ್ತೀನಿ. ಅಂಥದ್ದರಲ್ಲಿ ನಾನು ಪ್ರೊಫೆಷನಲ್ ಅಲ್ಲ ಅಂದರೆ ನನಗೆ ಸಿಕ್ಕಾಪಟ್ಟೆ ಬೇಸರವಾಗುತ್ತದೆ ಎನ್ನುತ್ತಾರೆ ಐಂದ್ರಿತಾ.

ಒಂದೇ ಒಂದು ಪುಟ್ಟ ಪ್ರಕರಣದಿಂದ ಏನೂ ಬದಲಾಗುವುದಿಲ್ಲ. ನಾನು ಈವರೆಗೆ ಪ್ರೊಫೆಷನಲ್ ಅಂತಾನೇ ಎಲ್ಲ ನಿರ್ದೇಶಕರೂ ಹೇಳಿದ್ದರು. ಹಾಗಾಗಿ ನನಗೆ ಅವಕಾಶಗಳಿಗೇನೂ ಕೊರತೆಯಿಲ್ಲ. ವಿಶೇಷವೆಂದರೆ, ಈ ಪ್ರಕರಣದ ನಂತರ ನಗೆ ಸ್ತ್ರೀವಾದಿ ಪಾತ್ರಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ನಾನು ನನ್ನತನವನ್ನು ಕಳೆದುಕೊಳ್ಳದೆ ಆ ಪ್ರಕರಣವನ್ನು ಧೈರ್ಯವಾಗಿ ಎದುರಿಸಿದ್ದಕ್ಕೆ ನನಗೆ ಅಂತಹ ಪಾತ್ರಗಳು ಬರುತ್ತಿವೆ ಅನಿಸುತ್ತದೆ. ಸಾಕಷ್ಟು ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು, ಅಭಿಮಾನಿಗಳು ನನ್ನ ಪರವಾಗಿ ನಿಂತು ನನಗಿನ್ನೂ ಧೈರ್ಯ ನೀಡಿದರು ಎಂದು ಐಂದ್ರಿತಾ ಹೇಳಿದ್ದಾರೆ.

ವಿಚಿತ್ರವೆಂದರೆ, ನೂರು ಜನ್ಮಕೂ ಚಿತ್ರಕ್ಕಾಗಿ ಹಾಂಗ್‌ಕಾಂಗ್‌ಗೆ ತೆರಳುವ ಮೊದಲು ಅಭಿಮಾನಿಯೊಬ್ಬ ನನಗೆ, 'ನೀವು ಯಾವುದೇ ವಿವಾದದಲ್ಲಿ ಸುದ್ದಿಯಾಗುವುದೇ ಇಲ್ಲ' ಎಂದರು. ದುರದೃಷ್ಟವೆಂದರೆ ಆತ ಹಾಗೆ ಹೇಳಿದ ಕೆಲವೇ ದಿನಗಳಲ್ಲಿ ವಿವಾದ ನನ್ನನ್ನು ಸುತ್ತಿಕೊಂಡಿತು. ಆತ ಹೇಳಿದ್ದು ಕಾಕತಾಳೀಯ ಅಷ್ಟೆ ಎಂದು ಐಂದ್ರಿತಾ ವಿವರಿಸುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐಂದ್ರಿತಾ ರೇ, ನಾಗತಿಹಳ್ಳಿ ಚಂದ್ರಶೇಖರ್, ನೂರು ಜನ್ಮಕೂ, ಕಪಾಳಮೋಕ್ಷ