ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೆರೆವಾಸದಿಂದ ಹೊರ ಬಂದ ಶ್ರೀನಗರ ಕಿಟ್ಟಿ (Shrinagar Kitty | Ramya | Sanju Weds Geetha)
ಸುದ್ದಿ/ಗಾಸಿಪ್
Bookmark and Share Feedback Print
 
Shrinagara KItty
MOKSHA
ಸಂಪೂರ್ಣ ಏಳು ತಿಂಗಳುಗಳ ಕಾಲ ಜೈಲಿನಲ್ಲಿ ವಾಸ ಮಾಡಿ ನಂತರ ಬಿಡುಗಡೆಯಾದ ವ್ಯಕ್ತಿ ನೋಡಲು ಹೇಗಿರುತ್ತಾನೆ? ಎಂಬ ಪ್ರಶ್ನೆ ನಟ ಶ್ರೀನಗರ ಕಿಟ್ಟಿ ಅವರ ತಲೆಗೆ ಬಂದದ್ದೇ ತಡ ಅದನ್ನು ಅವರು ತಮ್ಮ ಮೇಲೆಯೇ ಪ್ರಯೋಗ ಮಾಡಿಕೊಂಡಿದ್ದಾರೆ.

ಹೌದು. ನಟ ಶ್ರೀನಗರ ಕಿಟ್ಟಿ ಈಗ ಜೈಲಿನಿಂದ ಹೊರಬಂದಂತೆ ಕಾಣುತ್ತಿದ್ದಾರೆ. ನಾಲ್ಕೈದು ಕೆಜಿ ಕಳೆದುಕೊಂಡು ಊಟ ನಿದ್ರೆ ಬಿಟ್ಟವರಂತೆ ಕಾಣುತ್ತಿದ್ದಾರೆ. ಅವರಿಗೇನಪ್ಪಾ ಗತಿ ಬಂತು, ಈವರೆಗೆ ಸರಿಯಾಗೇ ಇದ್ದರಲ್ವಾ ಅಂತೆಲ್ಲಾ ಸಂದೇಹ ಪಡಬೇಡಿ. ಎಲ್ಲವೂ ಸಿನಿಮಾಕ್ಕಾಗಿ. ಅವರು ತಮ್ಮ ಮುಂದಿನ ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ತೂಕವನ್ನು ಇಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ನಾಯಕ ಕಿಟ್ಟಿ ಏಳು ವರ್ಷ ಜೈಲು ವಾಸ ಅನುಭವಿಸಿ ಹೊರಬರುವ ಪಾತ್ರವಿದೆ. ಜೈಲಿಗೆ ಹೋಗಿದ್ದಾರೆಂಬುದಕ್ಕೆ ಸ್ವಲ್ಪ ರಿಯಾಲಿಟಿ ಇರಲಿ ಎನ್ನುವ ಕಾರಣಕ್ಕೆ 4ರಿಂದ 5ಕೆಜಿ ತೂಕ ಇಳಿಸಿಕೊಂಡು ಸಣಕಲು ದೇಹ ಮಾಡಿಕೊಂಡಿದ್ದಾರೆ. ಮತ್ತಷ್ಟು ತೂಕ ಇಳಿಸುವ ಕಸರತ್ತು ಮುಂದುವರೆದಿದೆಯಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರೀನಗರ ಕಿಟ್ಟಿ, ಸಂಜು ವೆಡ್ಸ್ ಗೀತಾ, ರಮ್ಯ