ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಮತ್ತೆ ಮುಂಗಾರು' ಚಿತ್ರಕ್ಕೆ ಆಶಾ ಭೋಂಸ್ಲೆ ಧ್ವನಿ? (Asha Bhonsle | Matte Mungaru | E.Krishnappa)
ಸುದ್ದಿ/ಗಾಸಿಪ್
Bookmark and Share Feedback Print
 
Asha Bhonsle
PR
ಹಿಂದಿಯ ಗಾನ ಕೋಗಿಲೆ ಆಶಾ ಭೋಸ್ಲೆ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಅವರನ್ನು ಇಲ್ಲಿಗೆ ಕರೆತರುವ ಸಾಹಸಕ್ಕೆ ಕೈ ಹಾಕಿದವರು ಮುಂಗಾರು ಮಳೆ ಚಿತ್ರದ ನಿರ್ಮಾಪಕರಾದ ಇ.ಕೃಷ್ಣಪ್ಪ.

ಮೊಗ್ಗಿನ ಮನಸ್ಸು ಚಿತ್ರದ ನಂತರ ಅವರು ನಿರ್ಮಿಸುತ್ತಿರುವ ಚಿತ್ರ 'ಮತ್ತೆ ಮುಂಗಾರು'. ಈ ಹೊಸ ಚಿತ್ರದ ಒಂದು ಹಾಡನ್ನು ಆಶಾರಿಂದ ಹಾಡಿಸಲು ಕೃಷ್ಣಪ್ಪ ಯೋಚಿಸಿದ್ದಾರೆ. ಇದಕ್ಕೆ ಆಶಾಜೀ ಒಪ್ಪಿದ್ದಾರೋ ಇಲ್ಲವೋ ಎಂಬುದು ಇನ್ನೂ ತಿಳಿದು ಬಂದಿಲ್ಲ.

ದ್ವಾರ್ಕಿ ನಿರ್ದೇಶನದ ಮತ್ತೆ ಮುಂಗಾರು ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಉತ್ತರ ಕನ್ನಡದ ಕರಾವಳಿ ತೀರದಲ್ಲಿ ಶೂಟಿಂಗ್ ಮುಂದುವರೆದಿದೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಾಯಕನಟನಾಗಿ ನಟಿಸುತ್ತಿದ್ದು, ಮುಂಬಯಿ ಮೂಲದ ರಚನಾ ಮಲ್ಹೋತ್ರ ಕಿಟ್ಟಿಗೆ ಜೋಡಿಯಾಗಲಿದ್ದಾರೆ.

ಆಶಾರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ಈ ಹಿಂದೆ ನಡೆದಿತ್ತು. ಉದ್ಯಾನ್ ಎಕ್ಸ್‌ಪ್ರೆಸ್ ಚಿತ್ರತಂಡ ಅವರಿಂದ ಒಂದು ಹಾಡನ್ನು ಹಾಡಿಸಲು ಪ್ರಯತ್ನಿಸಿತ್ತಾದರೂ ಆಶಾಜೀ ಆಗೋಲ್ಲ ಎಂದಿದ್ದರು. ಈಗ ಕೃಷ್ಣಪ್ಪನವರ ಸರದಿ. ಆಶಾ ಎನಂತಾರೋ ಕಾದು ನೋಡಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಶಾ ಭೋಂಸ್ಲೆ, ಮತ್ತೆ ಮುಂಗಾರು, ಇ ಕೃಷ್ಣಪ್ಪ