ನಿರ್ದೇಶಕ ಯೋಗರಾಜ ಭಟ್ಟರ ಬರುವಿಕೆಗಾಗಿ ಗಾಂಧಿನಗರದಲ್ಲಿ ಒಬ್ಬಾಕೆ ಕಾದು ಕುಳಿತಿದ್ದಾರೆ. ಅವರೇ, ನಟಿ ಹರಿಪ್ರಿಯಾ. ತಮ್ಮದೇ ಬ್ಯಾನರ್ನಲ್ಲಿ ಚಿತ್ರ ನಿರ್ಮಿಸಲು ಹೊರಟಿರುವ ಯೋಗರಾಜ ಭಟ್ಟರು ತಮ್ಮ ಹೊಸ ಚಿತ್ರಕ್ಕೆ ದಿಗಂತ್ ನಾಯಕ, ಹರಿಪ್ರಿಯಾ ನಾಯಕಿ ಎಂದು ಘೋಷಿಸಿದ್ದರು. ಇದೇ ಖುಷಿಯಲ್ಲಿ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿದ್ದ ಹರಿಪ್ರಿಯಾ, ಒಂದೆರಡು ಆಫರ್ಗಳನ್ನು ತಿರಸ್ಕರಿಸಿಬಿಟ್ಟರಂತೆ.
ಆದರೆ, ಈ ನಡುವೆ ಗಾಂಧಿನಗರದಲ್ಲಿ ಗುಸುಗುಸು ಎದ್ದಿದೆ. ಅದೇನೆಂದರೆ, ಯೋಗರಾಜಭಟ್ಟರು ಹರಿಪ್ರಿಯಾರನ್ನು ಬದಲಿಸುವ ಚಿಂತನೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತಮ್ಮ ಕಥೆಗೂ ಹರಿಪ್ರಿಯಾಗೂ ಯಾಕೋ ಸರಿಬರುತ್ತಿಲ್ಲ ಎಂದೆನಿಸಿ ಇದೀಗ ಭಟ್ಟರು ಮತ್ತೊಬ್ಬ ನಾಯಕಿಯ ತಲಾಷ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ಇನ್ನೂ ಹರಿಪ್ರಿಯಾಗೆ ಅಧಿಕೃತವಾಗಿ ಈ ಸುದ್ದಿ ಬಂದಿಲ್ಲವಂತೆ.
ಆಕೆ ಈ ವಿಷಯ ನಿಜವೋ ಸುಳ್ಳೋ ಎಂಬುದನ್ನು ತಿಳಿಯುವುದ್ಕಕೆ ನೇರವಾಗಿ ಭಟ್ಟರನ್ನೇ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರಂತೆ. ಆದರೆ, ಭಟ್ಟರು ಮಾತ್ರ ಹರಿಪ್ರಿಯಾರ ಕಣ್ತಪ್ಪಿಸಿಕೊಂಡು ಒಡಾಡುತ್ತಿದ್ದಾರೆ ಎಂಬ ಸುದ್ದಿಯಿದೆ.