ಬಸವರಾಜು ನಿರ್ಮಾಣದ, ಎಲ್. ವಿನೋದ್ ಕುಮಾರ್ ನಿರ್ದೇಶನದ 'ಆರ್ಭಟ' ಚಿತ್ರಕ್ಕೆ ಆಕಾಶ್ ಆಡಿಯೋನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ನಗರದ ಅರಮನೆ ಹಾಗೂ ಚಿತ್ರದುರ್ಗದ ಹಲವು ರಮಣೀಯ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
'ಆರ್ಭಟ'ಕ್ಕೆ ಛಾಯಾಗ್ರಹಣ ಮಾಡಿದವರು ಮಹಾಂತೇಶ್ ಮಸ್ಕಿ, ಸಾಹಸ ನಿರ್ದೇಶನ ಅಲ್ಟಿಮೇಟ್ ಶಿವು ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರು ಬಿ.ಜಗನ್ನಾಥ್.
ರೂಪೇಶ್, ಸೋನಿಯಾ, ಸಂಚಿತಾ, ಕೋಟೆ ಪ್ರಭಾಕರ್, ಸುಹಾಸ್, ಪಂಕಜಾ ಮುಂತಾದವರು ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಅಭಿನಯಿಸಿದ್ದಾರೆ.