ತಮಿಳಿನ 'ಪುರುತ್ತಿವೀರನ್' ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಪ್ರಿಯಾಮಣಿ ಅಪ್ಪಟ ಕನ್ನಡತಿ. ಬೆಂಗಳೂರಿನ ಈ ಬೆಡಗಿ ತನ್ನ ವಿದ್ಯಾಭ್ಯಾಸ ಮುಗಿಸಿದ್ದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ.
'ರಾಮ್' ಚಿತ್ರದಲ್ಲಿ ನಟಿಸುವ ಸಲುವಾಗಿ ಪ್ರಿಯಾ ಕನ್ನಡಕ್ಕೆ ಬಂದದ್ದು, ಈ ಚಿತ್ರ ಇದೇ ವಾರ ಬಿಡುಗಡೆಯಾಗುತ್ತಿದೆ. ಅವರ ಬಳಿಗೆ ಬಂದ ಕನ್ನಡದ ಯಾವ ಕತೆಯೂ ಇಷ್ಟವಾಗದ ಕಾರಣ ಪ್ರಿಯಾ ಇಲ್ಲಿ ಇಷ್ಟು ದಿನ ಅಭಿನಯಿಸಲಿಲ್ಲವಂತೆ.
ಕೇವಲ ಸಂಭಾವನೆಗಾಗಿ ಇಲ್ಲಿ ಬಂದಿಲ್ಲ. ನಾನು ಕನ್ನಡತಿ. ಕನ್ನಡದ ಮೇಲೆ ನನಗೂ ಪ್ರೀತಿ ಇದೆ. ಒಳ್ಳೆಯ ಚಿತ್ರದ ಮೂಲಕ ಇಲ್ಲಿಗೆ ಬರಬೇಕೆಂಬುದು ನನ್ನ ಆಸೆಯಾಗಿತ್ತು ಅದೀಗ 'ರಾಮ್' ಚಿತ್ರದ ಮೂಲಕ ಈಡೇರಿದೆ ಎನ್ನುತ್ತಾರೆ ಪ್ರಿಯಾ.
ಒಂದು ವೇಳೆ ಪ್ರಿಯಾ ನಟಿಯಾಗದೇ ಇದ್ದಿದ್ದರೆ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿಕೊಂಡು ಯಾವುದಾದರೂ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರಂತೆ.