'ಯುಗ ಯುಗಗಳೆ ಸಾಗಲಿ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ ನಟ ಯಶಸ್ ಸೂರ್ಯ, ಚೊಚ್ಚಲ ಚಿತ್ರಕ್ಕಿಂತ ಈಗ ನಟಿಸಿರುವ 'ಶಿಶಿರ' ಚಿತ್ರದಲ್ಲೇ ಅಭಿನಯಕ್ಕೆ ಹೆಚ್ಚು ಅವಕಾಶವಿತ್ತು ಎನ್ನುತ್ತಾರೆ. ಆಗ ಅದೃಷ್ಟ ಅವರನ್ನು ಹುಡುಕಿಕೊಂಡು ಬಂದಿರಲಿಲ್ಲ.
ಹಂಸಲೇಖ ಸಾಹಿತ್ಯ, ಸಂಗೀತವಿದ್ದರೂ 'ಯುಗಯುಗಗಳೆ ಸಾಗಲಿ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿತ್ತು. ಥ್ರಿಲ್ಲರ್-ಸಸ್ಪೆನ್ಸ್ ಕಥೆಯ ಪ್ರಯೋಗಾತ್ಮಕ ಚಿತ್ರವಾದ 'ಶಿಶಿರ' ದಲ್ಲಿ ನಟಿಸಿದಖುಷಿ ಅವರಲ್ಲಿದೆಯಂತೆ.
'ಮಗಧೀರ', 'ಅರುಂಧತಿ' ಚಿತ್ರಗಳಿಗೆ ಸ್ಪೆಷಲ್ ಎಫೆಕ್ಟ್ ಅಳವಡಿಸಿದ ರಾಜಶೇಖರ್ 'ಶಶಿರ'ದಲ್ಲೂ ತಮ್ಮ ಕೈ ಚಳಕ ತೋರಿಸಿದ್ದಾರೆ. ಇದಕ್ಕೆಂದೇ 20 ಲಕ್ಷ ಖರ್ಚು ಮಾಡಲಾಗಿದೆಯಂತೆ. ಈ ಚಿತ್ರದ ಮತ್ತೊಂದು ವಿಶೇಷವೆನೆಂದರೆ, 4 ನಿಮಿಷದ ಒಂದು ಹಾಡನ್ನು ಒಂದೇ ಶಾಟ್‌ನಲ್ಲಿ ಚಿತ್ರೀಕರಿಸಿದ್ದಾರಂತೆ. ಹಾಗೂ 400ಕೋಣೆ ಮತ್ತು 200 ಬಾಗಿಲುಗಳುಳ್ಳ ಸಾಕಮ್ಮ ಬಂಗಲೆಯಲ್ಲಿ ಈ ಹಾಡನ್ನು ಚಿತ್ರಕರಿಸಲಾಯಿತೆಂದು ಹೇಳುತ್ತಾರೆ ಯಶಸ್.