ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಿಟ್ಟಾದ ಚಿತ್ರಗಳ ಕೀರ್ತಿ ನಾಯಕರಿಗಲ್ಲ, ನಿರ್ದೇಶಕರಿಗೆ..! (Kannada cinema | Karnataka | Kannada | Sandalwood)
ಸುದ್ದಿ/ಗಾಸಿಪ್
Bookmark and Share Feedback Print
 
ಈ ವರ್ಷ ಮೊದಲ ಯಶಸ್ಸು ಸಿಕ್ಕಿದ್ದು `ಅಂಬಾರಿ' ಚಿತ್ರಕ್ಕೆ. ಯೋಗೀಶ್ ನಾಯಕನಾಗಿದ್ದ ಈ ಚಿತ್ರ ಹೊಸ ನಿರ್ದೇಶಕ ಅರ್ಜುನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿತು.
Ambari
MOKSHA


ವಿಜಯ್ ನಾಯಕನಾಗಿ ಅಭಿನಯಿಸಿದ `ತಾಕತ್, `ಜಂಗ್ಲಿ' ಹಾಗೂ ದಿಗಂತ್ ನಾಯಕರಾಗಿದ್ದ `ಮನಸಾರೆ' ಮತ್ತು ಜಗ್ಗೇಶ್ ನಾಯಕತ್ವದ `ಎದ್ದೇಳು ಮಂಜುನಾಥ' ಚಿತ್ರಗಳು 2009ರಲ್ಲಿ ಯಶಸ್ವಿಯಾದ ಇನ್ನುಳಿದ ಚಿತ್ರಗಳು.

ಈ ಚಿತ್ರಗಳಲ್ಲಿ ನಟಿಸಿದ ಖ್ಯಾತ ಹೀರೋಗಳಿಂದ ಸಿನಿಮಾ ಯಶಸ್ಸು ಸಾಧಿಸಿತು ಎನ್ನುವುದಕ್ಕಿಂತ ನಿರ್ದೇಶಕರ ಹೊಸ ಪ್ರಯತ್ನಗಳಿಂದ ಈ ಎಲ್ಲಾ ಚಿತ್ರಗಳು ಹಿಟ್ ಆದವು ಎಂದು ಖಂಡಿತವಾಗಿಯೂ ಹೇಳಬಹುದು.
Soori
MOKSHA


ಈ ವರ್ಷದಲ್ಲಿ ಶಿವಣ್ಣ ನಟಿಸಿದ `ನಂದ, `ದೇವರು ಕೊಟ್ಟ ತಂಗಿ', 'ಹೊಡಿ ಮಗಾ', `ಭಾಗ್ಯದ ಬಳೆಗಾರ' ಚಿತ್ರಗಳು ಸೋಲುಂಡವು. ವಿಷ್ಣುವರ್ಧನ್ ಅಭಿನಯಿಸಿದ `ಬಳ್ಳಾರಿ ನಾಗ', `ನಂಯಜಮಾನ್ರು' ಚಿತ್ರಗಳು ಪ್ರೇಕ್ಷಕರಿಗೆ ಬಂದದ್ದು ಹೋದದ್ದು ಎರಡೂ ಗೊತ್ತಾಗಲಿಲ್ಲ.

ಇಂತಹ ಘಟಾನುಘಟಿ ನಾಯಕರುಗಳ ಚಿತ್ರಗಳೇ ಮುಗ್ಗರಿಸಿರುವಾಗ ನಿರ್ದೇಶಕರು ಕಥೆಗಳಿಗೆ ಪ್ರಾಮುಖ್ಯತೆ ಕೊಟ್ಟು ತುಯಾರಿಸಿದ ಚಿತ್ರಗಳು ಗೆದ್ದಿವೆ ಎಂದರೆ-- ಖ್ಯಾತ ನಟರಿಗಿಂತ ನಿರ್ದೇಶಕರೇ ವಾಸಿ ಎನ್ನಲು ಅಡ್ಡಿಯಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನಿಮಾ, ಕರ್ನಾಟಕ, ಕನ್ನಡ, ಸ್ಯಾಂಡಲ್ವುಡ್, ಪುನೀತ್, ಗಣೇಶ್