2009ರಲ್ಲಿ ಡಾ.ರಾಜ್ ಅಂಚೆಚೀಟಿ ಬಿಡುಗಡೆಯಾಗಿದ್ದು ನಮ್ಮ ಪುನೀತ್ ರಾಜ್‌ಕುಮಾರ್ ಅವರಿಗೆ ಈ ವರ್ಷ ಖುಷಿ ತಂದ ಸಂಗತಿಯಂತೆ. ಅಲ್ಲದೆ ಮುಂದಿನ ಏಪ್ರಿಲ್‌ನಲ್ಲಿ ರಾಜಣ್ಣನ ಪುಸ್ತಕ ಬಿಡುಗಡೆಗೊಳ್ಳಲ್ಲಿದ್ದು ಅದರ ಬರುವಿಕೆಯನ್ನೇ ಅಪ್ಪು ಕಾದು ನೋಡುತ್ತಿದ್ದಾರಂತೆ.
ಪವರ್ ಸ್ಟಾರ್ ನಿರ್ದೇಶನ ಮಾಡುವುದು ನಿಜವಂತೆ. ಅದರಲ್ಲೂ ಅಣ್ಣ ಶಿವಣ್ಣನ್ನೇ ಹಾಕಿಕೊಂಡು ಅವರು ಮೊದಲ ಚಿತ್ರ ಮಾಡುತ್ತಾರಂತೆ. ಅಣ್ಣನ ನೂರನೇ ಚಿತ್ರ ಅಥವಾ ಜೋಗಯ್ಯ ಚಿತ್ರವನ್ನು ನಾನು ನಿರ್ದೇಶನ ಮಾಡುತ್ತಿಲ್ಲ. ಅದೆಲ್ಲ ಸುಳ್ಳು ಸುದ್ದಿ ಎಂದು ಅಪ್ಪು ಹೇಳುತ್ತಾರೆ.
2010ಕ್ಕೆ ಅಪ್ಪುವಿನ ಯೋಜನೆಗಳು ಬಹಳಷ್ಟಿದ್ದು ಅವುಗಳಲ್ಲಿ ಕೆಲವನ್ನು ತಿಳಿಸಿದ್ದಾರೆ. ಹಿಂದೂಸ್ತಾನಿ ಸಂಗೀತ ಕಲಿಯುವುದು, ಸಾಧ್ಯವಾದರೆ ನಿರ್ದೇಶನದ ಕೋರ್ಸ್ ಮಾಡುವುದು, ಮುಂದೆಯೂ ಸಹ ರೀಮೇಕೋ - ಸ್ವಮೇಕೋ ತಾನು ಪ್ರೇಕ್ಷಕರಿಗೆ ಖುಷಿಯಾಗುವಂತೆ ನಟಿಸುವುದು ಮುಂತಾದುವು ಎನ್ನುತ್ತಾರೆ.