ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಂಗಾರು 'ಕಾಲ್ಗೆಜ್ಜೆ' ಅಂತಿಮ ಹಂತದಲ್ಲಿ (S. Bangaru | Kalgejje | Kannada cinema | Karnataka)
ಸುದ್ದಿ/ಗಾಸಿಪ್
Bookmark and Share Feedback Print
 
ಎಸ್. ಬಂಗಾರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೂರು ಹಾಡುಗಳಿಗೆ ಸಾಹಿತ್ಯ ಕೂಡ ರಚಿಸಿ ನಿರ್ದೇಶಿಸುತ್ತಿರುವ ಚಿತ್ರ 'ಕಾಲ್ಗೆಜ್ಜೆ'.

ಹೆಸರೇ ಸೂಚಿಸುವಂತೆ ಇದೊಂದು ಸಂಗೀತಮಯ ಚಿತ್ರ. ಹಾಗಾಗಿ ಇಲ್ಲಿ ಹೆಚ್ಚು ಹಾಡುಗಳಿಗೆ ಮಹತ್ವ ನೀಡಲಾಗಿದೆ. ಮೇಲುಕೋಟೆ, ಬಾಬಾಬುಡನ್ ಗಿರಿ, ಕೆಮ್ಮಣ್ಣು ಗುಂಡಿ, ಕುಂದಾಪುರದ ಸುತ್ತ-ಮುತ್ತ ರಮ್ಯ ತಾಣಗಳನ್ನು ಆರಿಸಿಕೊಂಡು ಹಾಡುಗಳನ್ನು ಚಿತ್ರೀಕರಿಸಲಾಗಿದೆ.

ಕುಂದಾಪುರದ ಬಳಿಯ ಬಸ್ರೂರು ಗ್ರಾಮದಲ್ಲಿ ನಾಯಕನ ಮನೆಯ ಭಾಗದ ಚಿತ್ರೀಕರಣವನ್ನು ಅನಂತ್‌ನಾಗ್, ಸುಮಿತ್ರ, ವಿಶ್ವಾಸ್ ಅಭಿನಯದಲ್ಲಿ ಮಾಡಲಾಗಿದೆ. ಈ ಹಂತದಲ್ಲಿ ನಾಲ್ಕು ಹಾಡು ಮತ್ತು ಶೇ.70 ಮಾತಿನ ಭಾಗ ಚಿತ್ರೀಕರಿಸಲಾಗಿದೆ.

ಗಂಧರ್ವ ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ಮುಖ್ಯ ತಾರಾಗಣದಲ್ಲಿ ರಂಗಾಯಣ ರಘು, ಪವಿತ್ರ ಲೋಕೆಶ್, ಶರಣ್ ಹಾಗೂ ಅತಿಥಿ ಪಾತ್ರವೊಂದರಲ್ಲಿ ಎಸ್. ಮಹೇಂದರ್ ಕಾಣಿಸಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಸ್ ಬಂಗಾರು, ಕಾಲ್ಗೆಜ್ಜೆ, ಕನ್ನಡ ಸಿನಿಮಾ, ಕರ್ನಾಟಕ, ಬಾಬಾಬುಡನ್ ಗಿರಿ ಎಸ್ ಬಂಗಾರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೂರು ಹಾಡುಗಳಿಗೆ ಸಾಹಿತ್ಯ ಕೂಡ ರಚಿಸಿ ನಿರ್ದೇಶಿಸುತ್ತಿರುವ ಚಿತ್ರ ಕಾಲ್ಗೆಜ್ಜೆ