'ಪ್ರಾರ್ಥನೆ' ಚಿತ್ರದಲ್ಲಿ ಪ್ರಕಾಶ್ ರೈ ನಟಿಸುವುದು ಖಾತರಿಯಾಗಿದೆ.
ಈ ಚಿತ್ರದ ನಿರ್ದೇಶಕರಾದ ಸದಾಶಿವ ಶೆಣೈ, ತಮ್ಮ ಚಿತ್ರದಲ್ಲಿ ನಟಿಸುವಂತೆ ರೈ ಅವರನ್ನು ಕೇಳಬೇಕು ಎಂದುಕೊಂಡಿದ್ದರಂತೆ. ಅಷ್ಟರೊಳಗೆ ಹೇಗೋ ವಿಷಯ ತಿಳಿದ ರೈ, ಸದಾಶಿವ ಶೆಣೈ ಕೇಳುವ ಮೊದಲೇ ಚಿತ್ರದಲ್ಲಿ ನಟಿಸುತ್ತೇನೆ ಎಂದುಬಿಟ್ಟರಂತೆ. ಮತ್ತೇನು? ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಅಂದ ಹಾಗಾಯಿತು.
ಶೆಣೈ ಅವರಿಗೆ ರೈ ಅವರ ಮೂರು ದಿನಗಳ ಕಾಲದ ಕಾಲ್‌ಶೀಟ್ ಬೇಕಂತೆ. ಶೆಣೈ ಎಲ್ಲವನ್ನು ಪ್ರಕಾಶ್ ಅವರಿಗೆ ತಿಳಿಸಿದ್ದು, ಅವರು ಒಪ್ಪಿಗೆ ನೀಡಿರುವುದು ಶೆಣೈ ಅವರಿಗೆ ಸಂತೋಷ ತಂದಿದೆಯಂತೆ.
ಮೊದಲು `ಪ್ರಾರ್ಥನೆ'ಗೆ ಸುಧಾರಾಣಿ ಆಯ್ಕೆ ಆಗಿದ್ದರು. ಕಾರಣಾಂತರದಿಂದ ಅವರು ಈ ಚಿತ್ರದಲ್ಲಿ ನಟಿಸಲಾಗುತ್ತಿಲ್ಲ. ಅವರ ಜಾಗಕ್ಕೆ ಮತ್ತೊರ್ವ ನಟಿಯ ಹುಡುಕಾಟ ನಡೆದಿದೆ.