ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆಪ್ತಮಿತ್ರದಲ್ಲಿ ಸೌಂದರ್ಯ, ಆಪ್ತರಕ್ಷಕದಲ್ಲಿ ವಿಷ್ಣು ಹೋದ್ರು! (Vishnuvardhan | Kannada film | Aptamitra | Aptarakshaka)
ಸುದ್ದಿ/ಗಾಸಿಪ್
Bookmark and Share Feedback Print
 
ತಾನೇ ನಟಿಸಿದ್ದ ಅಮೋಘ ಚಿತ್ರವನ್ನು ವೀಕ್ಷಿಸುವ ಭಾಗ್ಯ ಅಂದು ಸೌಂದರ್ಯಾರಿಗೆ ಸಿಗಲಿಲ್ಲ. ಇಂದು ಅದೇ ಪರಿಸ್ಥಿತಿ ವಿಷ್ಣುವರ್ಧನ್ ಅವರದ್ದು. ದುರಂತವೆಂದರೆ ಇವರಿಬ್ಬರ ಕೊನೆಯ ಚಿತ್ರಗಳೂ ಒಂದೇ ಕಥೆಯನ್ನು ಒಳಗೊಂಡಿರುವುದು.

ಆಪ್ತಮಿತ್ರ ಚಿತ್ರದ ಚಿತ್ರೀಕರಣ ಮುಗಿದ ಬಳಿಕ ಹೆಲಿಕಾಫ್ಟರ್ ಅಪಘಾತದಲ್ಲಿ ನಟಿ ಸೌಂದರ್ಯ ಮತ್ತು ಆಪ್ತಮಿತ್ರ ಭಾಗ ಎರಡು ಎಂದೇ ಹೇಳಲಾಗುವ ಆಪ್ತರಕ್ಷಕ ಚಿತ್ರ ಶೂಟಿಂಗ್ ಬಳಿಕ ವಿಷ್ಣುವರ್ಧನ್ ಸಾವನ್ನಪ್ಪಿರುವುದು ಕಾಕತಾಳೀಯ ಮತ್ತು ದುರಂತ.
Vishnuvardhan
MOKSHA


ಆಪ್ತರಕ್ಷಕ ಚಿತ್ರದ ಶೂಟಿಂಗ್ ಆರಂಭದಿಂದಲೇ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಸಣ್ಣ ಪುಟ್ಟ ಅಪಘಾತ, ಅವಘಡಗಳು, ಕಲಾವಿದರಿಗೆ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿತ್ತು. ಆಪ್ತಮಿತ್ರ ಚಿತ್ರದ ಪ್ರಮುಖ ಪಾತ್ರ ನಾಗವಲ್ಲಿ ಆಗಾಗ ಚಿತ್ರೀಕರಣಕ್ಕೆ ತೊಂದರೆ ಕೊಡುತ್ತಿದೆ ಎಂದೂ ಹೇಳಲಾಗುತ್ತಿತ್ತು.

ಈ ಚಿತ್ರದ ನಾಯಕಿರಲ್ಲೊಬ್ಬರಾದ ವಿಮಲಾ ರಾಮನ್ ಅವರದ್ದು ವಿಚಿತ್ರ ಅನುಭವ. ಹೊಟೇಲು ರೂಮಿನಲ್ಲಿ ಮಲಗಿದ್ದಾಗ ಹಿಂದುಗಡೆಯಿಂದ ನೆರಳಿನಂತೆ ಬಂದು ನಾಗವಲ್ಲಿಯನ್ನು ನೆನಪಿಸಿತ್ತು. ಉಳಿದ ಹಲವು ಕಲಾವಿದರಿಗೂ ಕೂಡ ಇದೇ ರೀತಿಯ ಅನುಭವಗಳಾಗಿದ್ದವು.

ಕೆಲವು ಅತಿಶಯ ವಿಚಾರಗಳು ಕಲಾವಿದರ ಗಮನಕ್ಕೆ ಬರುತ್ತಿತ್ತು. ಸ್ವತಃ ವಿಷ್ಣುವರ್ಧನ್ ಅವರೇ ಆಪ್ತರಕ್ಷಕ ಚಿತ್ರಕ್ಕಾಗಿ ಕುದುರೆ ಸವಾರಿ ಮಾಡುತ್ತಿರುವಾಗ ಆಯತಪ್ಪಿ ಬಿದ್ದುಬಿಟ್ಟಿದ್ದರು. ಅದೆಷ್ಟೋ ವರ್ಷಗಳಿಂದ ಕುದುರೆ ಓಡಿಸುತ್ತಿದ್ದರೂ ಸವಾರಿ ಸಂದರ್ಭದಲ್ಲಿ ಅವಘಢ ಎದುರಿಸಿದ ವಿಷ್ಣು ಆ ಸಂದರ್ಭದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಆದರೆ ವಿಧಿ ಅವರನ್ನು ಅದೇ ಕೊನೆಯ ಚಿತ್ರ ಎಂಬಲ್ಲಿಗೆ ಸೀಮಿತಗೊಳಿಸಿದೆ. ಸೌಂದರ್ಯ ಹೋದ ಚಿತ್ರ ಮುಂದುವರಿದ ಭಾಗದಲ್ಲಿ ವಿಷ್ಣುವರ್ಧನ್ ಕೂಡ ನಮ್ಮನ್ನು ಅಗಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಆಪ್ತಮಿತ್ರ, ಆಪ್ತರಕ್ಷಕ, ಸೌಂದರ್ಯ, ನಾಗರಹಾವು, ಕನ್ನಡ