ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನೂರೊಂದು ನೆನಪು ಎದೆಯಾಳದಿಂದ... (Vishnuvardhan | Bandhana | Noorondu Nenapu)
ಸುದ್ದಿ/ಗಾಸಿಪ್
Bookmark and Share Feedback Print
 
NRB
ವಿಷ್ಣು ವರ್ಧನ್ ಅವರ ಅಭಿನಯ ಸಾಮರ್ಥ್ಯವನ್ನು ಪ್ರಚುರಪಡಿಸಿದ 'ಬಂಧನ' ಚಿತ್ರದ ಈ ಹಾಡು ಎಂದೆಂದಿಗೂ ಮರೆಯಲಾಗದು.

ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ಎಂ.ರಂಗರಾವ್
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದು ಇರಲಮ್ಮ ಈ ದಿವ್ಯ ಬಂಧ
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ

ಒಲವೆಂಬ ಲತೆಯು ತಂದಂತ ಹೂವು
ಮುಡಿಯೇರೆ ನಲಿವು ಮುಡಿಜಾರೆ ನೋವು
ಕೈಗೂಡಿದಾಗ ಕಂಡಂತ ಕನಸು
ಅದೃಷ್ಟದಾಟ ತಂದಂತ ಸೊಗಸು
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ನೀವೆಂದು ಇರಬೇಕು ಸಂತೋಷದಿಂದ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ

ತುಟಿಮೇಲೆ ಬಂದಂತ ಮಾತೊಂದೆ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು
ಕೇಳಿ ಪಡೆದಾಗ ಸಂತೋಷ ಉಂಟು
ನಿಮ್ಮ ಹರುಷದಲಿ ನನ್ನ ಉಸಿರಿರಲಿ
ನಿಮ್ಮ ಹರುಷದಲಿ ನನ್ನ ಉಸಿರಿರಲಿ
ನನ್ನೆಲ್ಲ ಹಾರೈಕೆ ಈ ಹಾಡಿನಿಂದ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ||
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣು ವರ್ಧನ್, ಆಪ್ತ ಮಿತ್ರ, ಬಂಧನ, ನೂರೊಂದು ನೆನಪು, ಉದಯಶಂಕರ್