ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣು ಚಿತ್ರ ಜೀವನ ಪಯಣ ವಂಶವೃಕ್ಷದಿಂದ ಆಪ್ತರಕ್ಷಕ... (Vishnuvardhan No More | Kannada Film Actor | Vishnu Sena | Kannada Cinema Artist)
ಸುದ್ದಿ/ಗಾಸಿಪ್
Bookmark and Share Feedback Print
 
NRB
ನಟ ವಿಷ್ಣುವರ್ಧನ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು 1972ರಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶನದ 'ವಂಶವೃಕ್ಷ' ಚಿತ್ರದ ಮೂಲಕ. ಆದರೆ ಅವರಿಗೆ ಹೆಸರು ತಂದುಕೊಟ್ಟು ಪೂರ್ಣ ಪ್ರಮಾಣದ ನಾಯಕ ನಟನನ್ನಾಗಿ ಮಾಡಿದ ಚಿತ್ರ 1972ರಲ್ಲಿ ಬಿಡುಗಡೆಯಾದ ನಾಗರಹಾವು. ಈ ಚಿತ್ರದ ಮೂಲಕ ರಾಮಾಚಾರಿ ಎಂದು ವಿಷ್ಣು ಮನೆ ಮಾತಾದರು. ಈ ಚಿತ್ರದ ನಂತರ ವಿಷ್ಣು ತಮ್ಮ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಹೋದರು.

ವಿಷ್ಣುವಿನ 25ನೇ ಚಿತ್ರ 1977ರಲ್ಲಿ ಬಿಡುಗಡೆಯಾದ ರತ್ನಾಕರ-ಮಧು ನಿರ್ದೇಶನದ 'ಶನಿ ಪ್ರಭಾವ' . 1980ರಲ್ಲಿ ಸೋಮಶೇಖರ ಅವರು ತಯಾರಿಸಿದ 'ಕಾಳಿಂಗ' ಅವರ 50ನೇ ಚಿತ್ರ. ಧನಂಜಯ ನಿರ್ದೇಶನದ 1983ರಲ್ಲಿ ತೆರೆ ಕಂಡ 'ಗಂಧರ್ವಗಿರಿ' ರಾಮಾಚಾರಿಯ 75ನೇ ಚಿತ್ರ. 1986ರಲ್ಲಿ ಮೂಡಿ ಬಂದ ಕೆ.ರಂಗರಾಜನ್ ತಯಾರಿಸಿದ 'ಸತ್ಯಜ್ಯೋತಿ' ಸಾಹಸಸಿಂಹನ 100ನೇ ಚಿತ್ರ.

ಎಸ್.ವಿ.ರಾಜೇಂದ್ರ ಸಿಂಗ್ ಬಾಬು 1990 ರಲ್ಲಿ ತಯಾರಿಸಿದ 'ಮುತ್ತಿನ ಹಾರ' ಯಜಮಾನನ 125ನೇ ಚಿತ್ರ. 1996ರಲ್ಲಿ ವಿಜಯ್ ನಿರ್ದೇಶಿಸಿದ 'ಮೋಜುಗಾರ ಸೋಗಸುಗಾರ' ವಿಷ್ಣು ಅವರ 150ನೇ ಚಿತ್ರ. ನಾಗಣ್ಣ 2000ದಲ್ಲಿ ತಯಾರಿಸಿದ 'ಸೂರಪ್ಪ' ಆಪ್ತ ಮಿತ್ರನ 175ನೇ ಚಿತ್ರ. ಮೊನ್ನೆಯಷ್ಟೇ(2009) ತೆರೆಕಂಡ 'ಬಳ್ಳಾರಿ ನಾಗ' ಚಿತ್ರ (199ನೇ ಚಿತ್ರ)ವನ್ನು ದಿನೇಶ್ ಬಾಬು ಅವರು ನಿರ್ದೇಶಿಸಿದ್ದರು. 200ನೇ ಚಿತ್ರ 'ಆಪ್ತ ರಕ್ಷಕ' ಇನ್ನೂ ಬಿಡುಗಡೆಯಾಗಬೇಕಿದೆ.

ವಿಷ್ಣುವರ್ಧನ್ ಅವರಿಗೆ ಅತ್ಯಂತ ಹೆಸರು ತಂದುಕೊಟ್ಟ ಚಿತ್ರಗಳು ನಾಗರ ಹಾವು, ಕಳ್ಳ ಕುಳ್ಳ, ಕಿಟ್ಟು ಪುಟ್ಟು, ಸಾಹಸ ಸಿಂಹ, ಕರ್ಣ, ಬಂಧನ, ನಿಷ್ಕರ್ಷ, ಯಜಮಾನ ಹಾಗೂ ಆಪ್ತ ಮಿತ್ರ ಸೇರಿದಂತೆ ಇನ್ನೂ ಹಲವು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನಿಮಾ, ವಿಷ್ಣುವರ್ಧನ್, ಆಪ್ತಮಿತ್ರ, ನಾಗರಹಾವು