ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣು ಅಭಿಮಾನಿಗಳು ರಸ್ತೆ ಗುಡಿಸೋರು, ಕೆಡಿಸೋರಲ್ಲ: ಭಾರತಿ (Vishnuvardhan | Sahasa Simha | Bharati | Kannada film)
ಸುದ್ದಿ/ಗಾಸಿಪ್
Bookmark and Share Feedback Print
 
ನಿನ್ನೆ ಕನ್ನಡ ಚಿತ್ರರಂಗದ ಮೇರುನಟ ವಿಷ್ಣುವರ್ಧನ್ ತೀರಿಕೊಂಡ ಬಳಿಕ ಬೆಂಗಳೂರು ಸೇರಿದಂತೆ ಹಲವೆಡೆ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಗುರುವಾರ ಭಾರತಿ ವಿಷ್ಣುವರ್ಧನ್ ಪ್ರತಿಕ್ರಿಯಿಸಿದ ರೀತಿಯಿದು.

MOKSHA
ವಿಷ್ಣುವರ್ಧನ್ ಅಭಿಮಾನಿಗಳು ಯಾರಿಗೂ ತೊಂದರೆ ಮಾಡುವವರಲ್ಲ. ಅವರು ರಸ್ತೆಯನ್ನು ಒಪ್ಪ-ಓರಣವಾಗಿಡುತ್ತಾರೆಯೇ ಹೊರತು ಹಾಳು ಮಾಡುವವರಲ್ಲ. ಸಾಹಸಸಿಂಹನ ಅಭಿಮಾನಿಗಳು ದೌರ್ಜನ್ಯ ಮಾಡೋರಲ್ಲ. ಯಾರು ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ದಯವಿಟ್ಟು ಯಾರಿಗೂ ತೊಂದರೆ ಕೊಡ್ಬೇಡಿ.. ಯಾರಿಗಾದ್ರೂ ಒಳ್ಳೆಯದನ್ನು ಮಾಡಲು ಯತ್ನಿಸಿ. ಅವರು ಅಶಾಂತಿಯನ್ನು ಇಷ್ಟಪಟ್ಟವರಲ್ಲ. ದಯವಿಟ್ಟು ಅವರ ಮನಸ್ಸಿಗೆ ಹಿತವಾಗುವಂತೆ ನಡೆದುಕೊಳ್ಳಿ. ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಸಿಕೊಂಡರೆ ಅದು ನಮ್ಮನ್ನು ನಾವೇ ಹೊಡೆದುಕೊಂಡಂತೆ. ದಯವಿಟ್ಟು ಅದು ಬೇಡ. ಇದು ಅಭಿಮಾನಿಗಳಲ್ಲಿ ನಾನು ಮಾಡಿಕೊಳ್ಳುತ್ತಿರುವ ಮನವಿ, ವಿನಂತಿ ಎಂದಿದ್ದಾರೆ ಭಾರತಿ.

ಅವರ ಬೆಂಗಳೂರಿನ ಮನೆಯಲ್ಲಿ ಪತ್ರಕರ್ತರಿಗೆ ಮಾತಿಗೆ ಸಿಕ್ಕ ಭಾರತಿ, ಸರಕಾರ, ಪೊಲೀಸರು, ಇತರ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇಷ್ಟು ಸುಂದರವಾಗಿ ಅವರನ್ನು ಕಳುಹಿಸಿಕೊಡಲು ಸಾಧ್ಯವಾಗಿಸಿದ ಎಲ್ಲರಿಗೂ ನಾನು ಋಣಿ. ಸರಕಾರದ ಪ್ರಯತ್ನವಂತೂ ನನಗೆ ತುಂಬಾ ಸಂತಸ ನೀಡಿದೆ ಎಂದು ಎಲ್ಲರಿಗೂ ಅವರು ಕೃತಜ್ಞತೆ ಅರ್ಪಿಸಿದ್ದಾರೆ.

ಆದರೆ ವಿಷ್ಣು ಸ್ಮಾರಕದ ಕುರಿತು ಹೆಚ್ಚು ಮಾತನಾಡಲು ಅವರು ನಿರಾಕರಿಸಿದ್ದಾರೆ. ಅವರಿಗೆ ಯಾವ ಆಸೆಯೂ ಇರಲಿಲ್ಲ. ಏನನ್ನೂ ಅಪೇಕ್ಷೆ ಪಟ್ಟವರಲ್ಲ. ಇದ್ದುದರಲ್ಲಿ ಎಲ್ಲವನ್ನೂ ಕಂಡವರು. ದೇವರು ನನಗೆ ಕೊಟ್ಟಿದ್ದೇ ಹೆಚ್ಚು ಎಂದು ಅಂದುಕೊಂಡವರು. ಹಾಗಾಗಿ ಅವರು ಮತ್ತೊಬ್ಬರಿಗೆ ಏನಾದರೂ ಕೊಡಲು ಮುಂದಾಗಿದ್ದರೇ ಹೊರತು ಪಡೆಯಲು ಕೈ ಚಾಚಿದವರಲ್ಲ ಎಂದಿದ್ದಾರೆ.

ಸಿಂಹ ಯಾವತ್ತೂ ಸಿಂಹಾನೇ... ಅವರು ಸಾಹಸಸಿಂಹ.. ನಮ್ಮನ್ನು ಅವರು ಬಿಟ್ಟು ಹೋಗಿಲ್ಲ... ಎಲ್ಲೂ ಹೋಗಲ್ಲ... ಸಿಂಹ ಮತ್ತೆ ಹುಟ್ಟಿ ಘರ್ಜಿಸುವುದು ಖಂಡಿತಾ ಎಂದು ದುಃಖತಪ್ತರಾಗಿದ್ದ ಭಾರತಿ ಮಾತು ಮುಗಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಸಾಹಸಸಿಂಹ, ಅಂಬರೀಷ್, ರಾಜ್ಕುಮಾರ್, ಕನ್ನಡ ಸಿನಿಮಾ, ಭಾರತಿ, ಅಭಿಮಾನಿಗಳು