ಪ್ರತೀ ಬಾರಿ ನಮ್ಮ ರಿಮೇಕ್ ಚತುರರು ಪಕ್ಕದ ತಮಿಳು, ತೆಲುಗು ಭಾಷೆಗಳ ಚಿತ್ರಗಳಿಂದ ಭಟ್ಟಿ ಇಳಿಸಿದರೆ ನಿರ್ದೇಶಕ ಬಿ. ರಾಮಮೂರ್ತಿ ಮಾತ್ರ ಅಪರೂಪವೆಂಬಂತೆ ಮರಾಠಿ ಭಾಷೆಯ `ದೇ ಧಕ್ಕಾ' ಚಿತ್ರವನ್ನು ರಿಮೇಕ್ ಮಾಡಿದ್ದಾರೆ. ಅದೇ ಈಗ ಬಿಡುಗಡೆಗೆ ಸಿದ್ಧವಾಗಿರುವ `ಕ್ರೇಜಿ ಕುಟುಂಬ'ವದು.
ಇದು ರಿಮೇಕ್ ಅಲ್ಲ. `ದೇ ಧಕ್ಕಾ' ಚಿತ್ರದ ಸ್ಪೂರ್ತಿ ಅಷ್ಟೆ ಎನ್ನುತ್ತಾರೆ ರಾಮಮೂರ್ತಿ. ಅದು ಸುಳ್ಳೋ ನಿಜವೋ ಎಂಬುದನ್ನು ಕ್ರೇಜಿ ಕುಟುಂಬ ಬಿಡುಗಡೆಯಾದ ಮೇಲಷ್ಟೇ ತಿಳಿಯಲಿದೆ.
`ಇದೊಂದು ತುಂಬು ಕುಟುಂಬ. ಸಂತಸ ಮನೆ ಮಾಡಿರುವ ಕುಟುಂಬ. ಮನೆಯ ಸದಸ್ಯರೆಲ್ಲರೂ ಹಾಸ್ಯ ಚಕ್ರವರ್ತಿಗಳು. ಇಂತಹ ನಗೆಭರಿತ ಚಿತ್ರ ಎಲ್ಲರ ಮೆಚ್ಚಿನ ಚಿತ್ರವಾಗುವುದರಲ್ಲಿ ಅನುಮಾನವೇ ಇಲ್ಲ' ಎನ್ನುತ್ತಾರೆ ರಾಮಮೂರ್ತಿ.
ಅನಂತ್ ನಾಗ್, ರಮೇಶ್ ಅರವಿಂದ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.