ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರವಿ ಶ್ರೀವತ್ಸಾ-ಸುಷ್ಮಾ ಮದುವೆ ಆಗ್ತಾರಂತೆ, ನಿಜಾನ? (Ravi Srivatsa | Sushma | Ulta Palta | Deadly Soma-II)
ಸುದ್ದಿ/ಗಾಸಿಪ್
Bookmark and Share Feedback Print
 
Ravi - Sushma
MOKSHA
ಈ ಹಿಂದೆ ಬರಿಯ ವಿವಾದಗಳನ್ನೇ ಬೆನ್ನಿಗೆ ಅಂಟಿಸಿಕೊಂಟಿದ್ದ ನಿರ್ದೇಶಕ ರವಿ ಶ್ರೀವತ್ಸ ಹಾಗೂ ಉಲ್ಟಾ ಪಲ್ಟಾ ಚಿತ್ರದ ನಟಿ ಸುಷ್ಮಾ ವಿವಾಹವಾಗಲಿದ್ದಾರೆ ಎಂಬ ಬಿಸಿಬಿಸಿ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಇವರಿಬ್ಬರೂ ಇದೀಗ ಸಿಕ್ಕಾಪಟ್ಟೆ ಆಪ್ತರಾಗಿಬಿಟ್ಟಿದ್ದಾರಂತೆ. ನಾಯಕಿಯನ್ನು ಆರಿಸುವುದರಿಂದ ಹಿಡಿದು ಚಿತ್ರಕತೆ ಬರೆಯುವವರೆಗೂ ಸುಷ್ಮಾ, 'ಡೆಡ್ಲಿ ಸೋಮ-2' ಚಿತ್ರದ ಸಂಪೂರ್ಣ ಹೊಣೆಯನ್ನು ವಹಿಸಿಕೊಂಡಿದ್ದಾರಂತೆ. ಅಲ್ಲದೆ ಈ ಚಿತ್ರಕ್ಕೆ ಸುಷ್ಮಾ, ಕೋ ಡೈರೆಕ್ಟರ್ ಮತ್ತು ಪ್ರೊಡಕ್ಷನ್ ಕಂಟ್ರೋಲರ್ ಕೂಡ ಹೌದಂತೆ.

ಬಿ. ಜಯಶ್ರೀ ಅವರ ಪುತ್ರಿಯಾದ ಸುಷ್ಮಾ, ಹಾಡುಗಾರ್ತಿ ಹಾಗೂ ರಂಗಕಲಾವಿದೆಯೂ ಹೌದು. 'ಡೆಡ್ಲಿ ಸೋಮ-2' ಚಿತ್ರ ಮುಗಿದ ನಂತರ ತಾನು ಸುಷ್ಮಾಳನ್ನು ಮದುವೆ ಆಗುತ್ತೇನೆ ಎಂದು ರವಿ ತಮ್ಮ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರವಿ ಶ್ರೀವತ್ಸಾ, ಸುಷ್ಮಾ, ಬಿ ಜಯಶ್ರೀ, ಉಲ್ಟಾ ಪಲ್ಟಾ, ಡೆಡ್ಲಿ ಸೋಮ, ಸಿನಿಮಾ