ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನನ್ನ ಏಳ್ಗೆಗೆ ವಿಷ್ಣು ಕಾರಣ, ಆತ ಎಲ್ಲೂ ಹೋಗಿಲ್ಲ: ದ್ವಾರಕೀಶ್ (Dwarakish | Vishnuvardhan | Kiladi Jodi | Sahasasimha)
ಸುದ್ದಿ/ಗಾಸಿಪ್
Bookmark and Share Feedback Print
 
Vishnu - Dwarakish
PR
ನಾನು ಈ ಹಂತಕ್ಕೆ ಬೆಳೆದಿದ್ದೇನಾದರೆ ಅದಕ್ಕೆ ಕಾರಣ ವಿಷ್ಣುವರ್ಧನ್. ಆತ ಕೇವಲ ನನಗೆ ಗೆಳೆಯನಾಗಿರಲಿಲ್ಲ. ನನ್ನ ಮಗುವೂ ಆಗಿದ್ದ. ಖಂಡಿತಾ ಆತ ಎಲ್ಲೂ ಹೋಗಿಲ್ಲ. ನಮ್ಮ ಸುತ್ತಾನೇ ಇದ್ದಾನೆ ಎಂದು ಕಿಲಾಡಿ ಜೋಡಿ ಎಂದೇ ಪ್ರಸಿದ್ಧಿ ಪಡೆದಿದ್ದ ಸಾಹಸಸಿಂಹನ ಗೆಳೆಯ ದ್ವಾರಕೀಶ್ ಭಾವುಕರಾಗಿ ನುಡಿದಿದ್ದಾರೆ.

ಮೊದಲನೇ ದಿನ ವಿಷ್ಣು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ದ್ವಾರಕೀಶ್ ಎರಡನೇ ದಿನವೂ ಅಭಿಮಾನ್ ಸ್ಟುಡಿಯೋದಲ್ಲಿ ಸಮಾಧಿಯೆದುರು ನಿಂತು ಒಬ್ಬರೇ ನಿಂತು ಗೆಳೆಯನನ್ನು ನೆನೆದು ಕಣ್ಣೀರು ಹಾಕುತ್ತಿದ್ದ ದೃಶ್ಯ ಹೃದಯ ಕಲಕುವಂತಿತ್ತು. ಈ ಸಂದರ್ಭದಲ್ಲಿ ಹೃದಯದಿಂದ ಮಾತನಾಡಿದ ಅವರ ಕೆಲವು ಮಾತುಗಳಿವು...

ಚಿತ್ರರಂಗದ ಜೀವನದಲ್ಲಿ ನನಗೆ ಅತಿ ಹೆಚ್ಚಿನ ಪ್ರೀತಿಯಿಂದ ಇದ್ದೋನೆಂದರೆ ವಿಷ್ಣು. ಅವನು ಎಲ್ಲೂ ಹೋಗಿಲ್ಲ.. ಓಟ್‌ಡೋರ್ ಶೂಟಿಂಗ್‌ಗೆ ಹೋಗಿರ್ತಾನೆ. ಅವನು ಬಿಟ್ಟು ಹೋಗೋನಲ್ಲ. ಅದರಲ್ಲೂ ದ್ವಾರಕೀಶ್‌ನನ್ನು ಬಿಟ್ಟು ಹೋಗಲ್ಲ.. ಚಿತ್ರ ಜೀವನದಲ್ಲಿ ನನ್ನ ಆಸೆಗಳನ್ನೆಲ್ಲ ಈಡೇರುವಂತೆ ಮಾಡಿದವನು ವಿಷ್ಣು.. ನಾನು ಬೆಳೆಯಲು ಕಾರಣ ವಿಷ್ಣು, ನನ್ನ ಏಳ್ಗೆಗೆ ಕೂಡ ಅವನೇ ಕಾರಣ. ಕಷ್ಟ-ಸುಖದಲ್ಲಿ ಭಾಗಿಯಾಗಿದ್ದ...

ನನ್ನ ಐದು ಮಕ್ಕಳ ಜತೆಗೆ ಅವನು ನನಗೆ ಆರನೇ ಮಗನಾಗಿದ್ದ. ಮರೆಯಲು ಸಾಧ್ಯವಿಲ್ಲ. ನನ್ನ ಮನೆಯವರಂತೂ ಮರೆಯಲು ಸಾಧ್ಯವಿಲ್ಲ. ಕನ್ನಡದ ಮಣ್ಣು ಇರೋವರೆಗೆ ವಿಷ್ಣು ಮಾತ್ರ ಇದ್ದೇ ಇರ್ತಾನೆ.. ಅವನಿಗೆ ಶಾಂತಿ ಸಿಗಲಿ... ಸದಾ ನಮ್ಮ ಜತೆ ಇರ್ಲಿ ಅಂತ ಕೇಳ್ಕೋತೋನೆ ಎಂದು ದುಃಖತಪ್ತರಾಗಿದ್ದ ದ್ವಾರಕೀಶ್ ತಿಳಿಸಿದ್ದಾರೆ.

ಹಲವು ದಶಕಗಳ ಕಾಲ ಚಿತ್ರರಂಗದಲ್ಲಿ ಹಾಗೂ ವೈಯಕ್ತಿಕವಾಗಿ ಗೆಳೆಯರಾಗಿ ಮೆರೆದಾಡಿದ್ದ ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಇತ್ತೀಚಿನ ಕೆಲ ವರ್ಷಗಳಿಂದ ಬೇರೆಯಾಗಿದ್ದರು. ಆಪ್ತಮಿತ್ರ ಚಿತ್ರದ ಮೂಲಕ ಇದಕ್ಕೆ ತೇಪೆ ಹಚ್ಚಲು ಯತ್ನಿಸಲಾಯಿತಾದರೂ ಅದು ಹೆಚ್ಚಿನ ಫಲ ಕೊಟ್ಟಿರಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದ್ವಾರಕೀಶ್, ವಿಷ್ಣುವರ್ಧನ್, ಕಿಲಾಡಿ ಜೋಡಿ, ಸಾಹಸಸಿಂಹ, ಕರ್ನಾಟಕ