ಎಸ್. ಬಸವರೆಡ್ಡಿ ನಿರ್ಮಿಸುತ್ತಿರುವ 'ಮಂದಹಾಸ' ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಭದ್ರಾವತಿ ಮತ್ತು ಸಂತೆಬೆನ್ನೂರಿನಲ್ಲಿ ಎರಡು ಗೀತೆಗಳ ಚಿತ್ರೀಕರಣ ನಡೆದಿದೆ.
ಬಾಲಿವುಡ್‌ನ ಲಾಂಜಿ ಫರ್ನಾಂಡಿಸ್ ನೃತ್ಯ ಸಂಯೋಜಿಸಿದ್ದಾರೆ. ನಾಳೆ(ಜ.2)ಯಿಂದ 2ನೇ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರ ನಿರ್ದೇಶಕ ನಾಯರ್ ತಿಳಿಸಿದ್ದಾರೆ.
ಈ ಚಿತ್ರವನ್ನು ರಾಜೇಶ್ ನಾಯರ್ ನಿರ್ದೇಶಿಸುತ್ತಿದ್ದು, ಕತೆ, ಚಿತ್ರಕತೆಯನ್ನೂ ಬರೆದಿದ್ದಾರೆ. ಮಂಜು ಮಾಂಡವ್ಯ ಸಂಭಾಷಣೆ, ಸಂತೋಷ್ ರೈ ಪತಾಜೆ ಛಾಯಾಗ್ರಹಣ, ವೀರಸಮರ್ಥ್ ಸಂಗೀತ ಈ ಚಿತ್ರಕ್ಕಿದೆ.
ನಾಯಕರಾಗಿ ರಾಕೇಶ್ ಮತ್ತು ಚೇತನ್ ಅಭಿನಯಿಸುತ್ತಿದ್ದು, ನಿಕ್ಕಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಶ್ರೀನಾಥ್, ಅಲೋಕ್ ಮುಂತಾದವರು ಮುಖ್ಯ ತಾರಾಗಣದಲ್ಲಿದ್ದಾರೆ.