ಕೊಡಗು ಜಿಲ್ಲೆ ಅದರದ್ದೇ ಆದ ವಿಶೇಷತೆಗಳಿಂದ ಜನರ ಗಮನ ಸೆಳೆದಿದೆ. ಅದರಲ್ಲೂ ಕೊಡವ ಸಂಸ್ಕೃತಿಯನ್ನು ವರ್ಣಿಸಲು ಅಸಾಧ್ಯ. ಇದೇ ಸಂಸ್ಕೃತಿಯನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ನಮ್ಮಲ್ಲಿ ಹಲವು ಚಿತ್ರಗಳು ಬಂದಿವೆ. ಬರುತ್ತಲೂ ಇವೆ.
ಅದೇ ರೀತಿ ಇದೀಗ ಮತ್ತೊಂದು ಕೊಡವ ಚಿತ್ರ ಸೆಟ್ಟೇರಿದೆ. ಚಿತ್ರದ ಹೆಸರು 'ಜಡಿ ಮಳೆ' ಅಂತ. ಈ ಚಿತ್ರದಲ್ಲಿ ಮಳೆ ಜೊತೆಗೆ ಸಂಪೂರ್ಣ ಕೊಡವ ಸಂಸ್ಕೃತಿಯನ್ನು ಬಿಂಬಿಸಲಾಗುತ್ತದಂತೆ.
ಕೊಡವ ಪತ್ರಿಕೆ ಸಂಪಾದಕ ಮದೋಶ್ ಪೂವಯ್ಯ ಈ ಚಿತ್ರದ ನಿರ್ಮಾಪಕರು. ವಿಶು ಉತ್ತಯ್ಯ ನಿರ್ದೇಶಕರು. ನಾಯಕನಾಗಿ ಸಂಪತ್ ಸೋಮಣ್ಣ, ನಾಯಕಿಯಾಗಿ ದೇನೂ ನಟಿಸಿದ್ದಾರೆ. ಉಮೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.