ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚತುರ್ಭಾಷೆಯಲ್ಲಿ ಪ್ರೀತಿ ಮಾಡಲಿದ್ದಾರೆ ಪ್ರಜ್ವಲ್ ದೇವರಾಜ್ (Prajwal Devraj | Neenu naanu preeti | Gulama | Nannavanu)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕಳೆದ ವರ್ಷದ ಸೂಪರ್ ಫ್ಲಾಪ್ ಹೀರೋ ಪ್ರಜ್ವಲ್ ದೇವರಾಜ್ ಇದೀಗ ಚತುರ್ಭಾಷಾ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಲಾಗುವ ಈ ಸಿನಿಮಾದ ಹೆಸರು 'ನೀನು ನಾನು ಪ್ರೀತಿ'.

ಕಳೆದ ವರ್ಷ ಪ್ರಜ್ವಲ್ ದೇವರಾಜ್ ನಟಿಸಿ ಬಿಡುಗಡೆಯಾದ 'ಗುಲಾಮ', 'ಕೆಂಚ', 'ಜೀವಾ' ಚಿತ್ರಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಗಿದ್ದವು. 'ಸರಿಗಮ', 'ಸುಪರ್ ಮ್ಯಾನ್' ಚಿತ್ರಗಳು ಪ್ರಾರಂಭವಾಗಿವೆ, ಆದರೆ ಮುಕ್ತಾಯ ಕಾಣುತ್ತಿಲ್ಲ. 'ನನ್ನವನು' ಬಿಡುಗಡೆಗೆ ಕಾಯುತ್ತಿದ್ದಾನೆ. ಆದರೂ ಅವರ ಬೇಡಿಕೆ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಈ ಚತುರ್ಭಾಷಾ ಚಿತ್ರ ನಿದರ್ಶನ.

'ನೀನು ನಾನು ಪ್ರೀತಿ' ಚಿತ್ರದ ನಿರ್ಮಾಪಕರು ತೆಲುಗಿನ ಟಿ.ರಮೇಶ್ ನಾಯ್ಡು ಹಾಗೂ ನಿರ್ದೇಶಕರು ಶ್ರೀನಿವಾಸ ರಾಜು. ಸಂಗೀತ ಇಳಯರಾಜ ಅವರದ್ದು. ನಾಯಕಿಯನ್ನು ಹುಡುಕುತ್ತಿದ್ದಾರೆ.

ಈ ಚಿತ್ರದ ಸಂಪೂರ್ಣ ಚಿತ್ರೀಕರಣ ವಿದೇಶದಲ್ಲಿ. ಮಾರ್ಚ್ ತಿಂಗಳಲ್ಲಿ ಚಿತ್ರತಂಡ ವಿಮಾನ ಏರಲಿದೆ. ಕನಿಷ್ಠ ಒಂದೆರಡು ಭಾಷೆಯಲ್ಲಾದರೂ ತನಗೆ ಅದೃಷ್ಟ ಒಲಿಯಬಹುದು ಎಂಬುದು ಪ್ರಜ್ವಲ್ ನಿರೀಕ್ಷೆ ಮತ್ತು ಭರವಸೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೀನು ನಾನು ಪ್ರೀತಿ, ಪ್ರಜ್ವಲ್ ದೇವರಾಜ್, ಕನ್ನಡ ಸಿನಿಮಾ, ಗುಲಾಮ, ನನ್ನವನು