ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೀರೆ ಉಟ್ರೆ ಅಭಿಮಾನಿಗಳು ಹುಚ್ಚೇಳ್ತಾರೆ: ಗಜನಿಂಬೆ ನಮಿತಾ (Namita | Hoo | Ravichandran | Kannada cinema)
ಸುದ್ದಿ/ಗಾಸಿಪ್
Bookmark and Share Feedback Print
 
Namita
MOKSHA
ದಕ್ಷಿಣ ಭಾರತದ ಸೆಕ್ಸಿ ತಾರೆ ನಮಿತಾ ಮತ್ತೊಮ್ಮೆ ಸ್ಯಾಂಡಲ್‌ವುಡ್‌ನತ್ತ ಹೆಜ್ಜೆ ಹಾಕಿರುವುದು ಹಳೆ ಸುದ್ದಿ. ಈ ಹಿಂದೆ ದರ್ಶನ್ ಜೊತೆ ನಟಿಸಿ ಮರಳಿದ್ದವರು ಮತ್ತೆ ರವಿಚಂದ್ರನ್ ತೆಕ್ಕೆಗೆ ಸೇರುತ್ತಿದ್ದಾರೆ.

ಕನಸುಗಾರನ ಜತೆ 'ನೀಲಕಂಠ'ದಲ್ಲಿ ಮೋಡಿ ಮಾಡಿದ್ದ, ಶೀಘ್ರದಲ್ಲೇ ರವಿಚಂದ್ರನ್ ಕೈಯಲ್ಲಿ 'ಹೂ'ವಾಗಲಿರುವ ದಕ್ಷಿಣ ಭಾರತದ ಮಾದಕ ನಟಿಗೆ ಸೀರೆ ಅಂದ್ರೆ ಅಷ್ಟಕ್ಕಷ್ಟೇ ಎಂದು ಬೆಂಗಳೂರಿನಲ್ಲೂ ಪುನರುಚ್ಛರಿಸಿದ್ದಾರೆ.

ಅಭಿಮಾನಿಗಳಿಂದ ಕೊಯಂಬತ್ತೂರು, ಚೆನ್ನೈನಲ್ಲಿ ದೇವಾಲಯ ನಿರ್ಮಿಸಿಕೊಂಡಿರುವ ನಮಿತಾಗೆ ಸೀರೆ ಅಂದರೆ ಅಷ್ಟಕ್ಕಷ್ಟೇ. ನನ್ನ ಅಮೋಘ ಅಂಗಸೌಷ್ಟವದಿಂದ ಅಭಿಮಾನಿಗಳು ಹುಚ್ಚೇಳುವುದು ನನಗಿಷ್ಟವಿಲ್ಲ ಎಂದು ಪರೋಕ್ಷವಾಗಿ ಸ್ವಪೂಜೆಗಿಳಿಯುತ್ತಾರೆ ಆಕೆ.

ಆದರೆ ಪ್ರೇಕ್ಷಕರಿಗೆ ಆಕೆಯನ್ನು ಸೀರೆಯಲ್ಲೇ ನೋಡುವುದು ಇಷ್ಟವಂತೆ. ಅದು ಯಾಕೆ ಎಂಬುದನ್ನು ಅರಿತುಕೊಂಡಿರುವ ನಮಿತಾ, ಅಭಿಮಾನಿಗಳ ಅಭಿರುಚಿಯನ್ನು ಕೆಡಿಸುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿಯೇ ಸೀರೆ ಉಡಲಾರೆ ಎಂದು ಹಲವು ಬಾರಿ ಮುಖ ತಿರುಗಿಸಿದ್ದುಂಟಂತೆ.

ಉಡುಪಿನ ಬಗ್ಗೆ ಮಾತಾಡಿದರೆ ಸೀರೆ ಅಷ್ಟಕ್ಕಷ್ಟೆ ಎನ್ನುವ ಗಜಗಾಮಿನಿಗೆ ಜೀನ್ಸ್ ಮತ್ತು ಟಾಪ್ ಧರಿಸುವುದೆಂದರೆ ಬಹಳ ಇಷ್ಟವಂತೆ.

ಅಭಿಮಾನಿಗಳು ತನ್ನನ್ನು ದೇವರಿಗೆ ಹೋಲಿಸುತ್ತಿರುವುದು ಖುಷಿಯ ಸಂಗತಿ ಎನ್ನುತ್ತಾರೆ ಈ ಗಜನಿಂಬೆ. ಇದುವರೆಗೆ ಅವರು ಒಟ್ಟು 35 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಚಿತ್ರಗಳಲ್ಲೂ ಅವರದ್ದು ಗ್ಲಾಮರಸ್ ಪಾತ್ರ. ಸೆಕ್ಸಿ ಆಗಿರುವವರನ್ನು ಸೆಕ್ಸಿ ನಟಿ ಎಂದು ಕರೆದರೆ ತಪ್ಪೇನು? ಎಂದು ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ ನಮಿತಾ.

ಹಲವು ದಿನಗಳಿಂದ ಒಂದೇ ಪಾತ್ರದಲ್ಲಿ ನಟಿಸಿ ಬೇಸರಗೊಂಡಿರುವ ನಮಿತಾಗೆ ಸವಾಲು ಎನಿಸುವಂತಹ ಪಾತ್ರಗಳು ಬೇಕಂತೆ.

ಇಂದ್ರ ಚಿತ್ರದಲ್ಲಿ ನಟಿಸಿದ್ದು ತನ್ನ ಜೀವನದ ಕೆಟ್ಟ ಘಳಿಗೆ ಎನ್ನುತ್ತಾರೆ ನಮಿತಾ. ಈ ಚಿತ್ರದ ಶೂಟಿಂಗ್ ವೇಳೆ ಅವರಿಗೆ 4 ಇಂಚಿನ ಟಾಪ್, 2 ಇಂಚಿನ ಡೀಪ್ ನೆಕ್ ಇರುವ ಟಾಪ್ ಕೊಟ್ಟು ನಟಿಸು ಎಂದಿದ್ದರಂತೆ. ಅದಕ್ಕೆ ನಮಿತಾ ಬಿಲ್ಕುಲ್ ಆಗುವುದಿಲ್ಲ ಎಂದು ರಂಪಾಟ ಮಾಡಿದ್ದರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಮಿತಾ, ಹೂ, ರವಿಚಂದ್ರನ್, ಕನ್ನಡ ಸಿನಿಮಾ, ದರ್ಶನ್, ನೀಲಕಂಠ, ಇಂದ್ರ