ಹೌದು, ವರನಟ ಡಾ. ರಾಜ್ ಕುಮಾರ್ ಮತ್ತು ಮೇರುನಟ ವಿಷ್ಣುವರ್ಧನ್ ಇಬ್ಬರೂ ಅಸ್ತಂಗತರಾಗಿದ್ದು ಬುಧವಾರದಂದು. ಕನ್ನಡ ಚಿತ್ರರಂಗದ ಅಪರೂಪದ ಮುತ್ತುಗಳೆರಡೂ ನಮ್ಮಿಂದ ದೂರವಾದದ್ದು ಹೃದಯಾಘಾತದಿಂದ ಮತ್ತು ಅವರಿಬ್ಬರೂ ಹೊಸ ವರ್ಷದ ಎರಡು ದಿನಗಳ ಮೊದಲು ಇಹಲೋಕ ತ್ಯಜಿಸಿದ್ದಾರೆ ಎಂಬಂತಹ ಹತ್ತು-ಹಲವು ವಿಶಿಷ್ಟ ಸ್ವಾಮ್ಯತೆ-ಭಿನ್ನತೆಗಳನ್ನು ನೋಡೋಣ ಬನ್ನಿ.
** ಕನ್ನಡ ಚಿತ್ರರಂಗವು ತನ್ನ ಒಂದು ಪೀಳಿಗೆಯನ್ನು ಕೇವಲ 44 ತಿಂಗಳುಗಳ ಅಂತರದಲ್ಲಿ ಕಳೆದುಕೊಂಡಿದೆ. ರಾಜ್ 2006ರ ಏಪ್ರಿಲ್‌ನಲ್ಲಿ ನಮ್ಮನ್ನಗಲಿದರೆ, ವಿಷ್ಣು 2009ರ ಡಿಸೆಂಬರ್‌ನಲ್ಲಿ ತನ್ನ ಪ್ರಯಾಣವನ್ನು ಮುಗಿಸಿದ್ದಾರೆ. ಇಲ್ಲೂ ಸ್ವಾಮ್ಯತೆಯನ್ನು (2006, 2009) ಕಾಣಬಹುದಾಗಿದೆ.
** ರಾಜ್ ಕುಮಾರ್ ಹುಟ್ಟಿದ್ದು 24ನೇ ತಾರೀಖಿನಂದು. ಅಂದರೆ 2+4=6; ವಿಷ್ಣುವರ್ಧನ್ ಹುಟ್ಟಿದ್ದು 18ರಂದು. ಅಂದರೆ 1+8=9; ಇಲ್ಲಿ ಬರುವ ಎರಡೂ ಉತ್ತರಗಳನ್ನು ಮೂರರಿಂದ (3) ಗುಣಿಸಬಹುದು ಮತ್ತು ಉಲ್ಟಾಪಲ್ಟಾ (6 ಮತ್ತು 9) ಮಾಡಿದರೆ ಎರಡೂ ಉತ್ತರಗಳು ಒಂದೇ ಆಗುತ್ತವೆ.
** ರಾಜ್ ನಮ್ಮನ್ನಗಲಿದ್ದು 12ರಂದು. ಅಂದರೆ 1+2= 3; ವಿಷ್ಣು ಬಾರದ ಲೋಕಕ್ಕೆ ಹೋಗಿದ್ದು 30ರಂದು. ಅಂದರೆ 3+0 =3; ಸಂಖ್ಯಾಶಾಸ್ತ್ರದ ವಿಚಾರಕ್ಕೆ ಬಂದಾಗ ಇವೆರಡೂ ಒಂದೇ.
** ಸೌರಮಾನ ಪಂಚಾಂಗದಂತೆ ಹೊಸ ವರ್ಷದ (ಏಪ್ರಿಲ್ 14) ಎರಡು ದಿನಗಳ ಮೊದಲು ರಾಜ್ ನಿಧನರಾಗಿದ್ದರು. ಗ್ರೆಗೊರಿಯನ್ ಕ್ಯಾಲೆಂಡರ್ ಹೊಸ ವರ್ಷದ (ಜನವರಿ 1) ಎರಡು ದಿನಗಳ ಮೊದಲು ವಿಷ್ಣು ಮೃತರಾಗಿದ್ದಾರೆ.
PR
** ರಾಜ್ ಮತ್ತು ವಿಷ್ಣು ಇಬ್ಬರೂ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದು ಬುಧವಾರ.
** ಮುತ್ತುರಾಜ್ (Muthuraju) - 9 ಅಕ್ಷರಗಳು; ಸಂಪತ್ ಕುಮಾರ್ (Sampath Kumar): 12 ಅಕ್ಷರಗಳು, ಅಂದರೆ ಇವೆರಡೂ ಸಂಖ್ಯೆಗಳನ್ನು 3ರಿಂದ ಗುಣಿಸಬಹುದಾಗಿದೆ.
** ರಾಜ್ ಹುಟ್ಟಿದ್ದು 24ರಂದು ಮತ್ತು ದಿವಂಗತರಾದದ್ದು 12ರಂದು. ಇವರ ಹುಟ್ಟು-ಸಾವಿನ ದಿನದ ಅಂಕಿಗಳ ನಡುವಿನ ಅಂತರ 12 ದಿನಗಳು. ವಿಷ್ಣು ಹುಟ್ಟಿದ್ದು 18ರಂದು, ಸತ್ತದ್ದು 30ರಂದು. ಕಾಕತಾಳೀಯವೆಂದರೆ ಸಾಹಸಸಿಂಹನ ಹುಟ್ಟು-ಸಾವಿನ ದಿನದ ಅಂಕಿಗಳ ಅಂತರ ಕೂಡ 12 ದಿನಗಳಾಗಿರುವುದು.
** ರಾಜ್ ರಾಮಯ್ಯ ಆಸ್ಪತ್ರೆಯಲ್ಲಿ ಹಾಗೂ ವಿಷ್ಣು ವಿಕ್ರಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಂದರೆ ಇಲ್ಲೂ ಅವರ ಹೆಸರು ಮತ್ತು ಆಸ್ಪತ್ರೆಗಳ ಹೆಸರಿನ ಮೊದಲ ಅಕ್ಷರಗಳು ಒಂದೇ ಆಗಿವೆ.
** ರಾಜ್ ಹುಟ್ಟಿದ್ದು ಮತ್ತು ಮೃತರಾಗಿದ್ದು ಎರಡೂ ಒಂದೇ (ಏಪ್ರಿಲ್) ತಿಂಗಳಿನಲ್ಲಿ. ವಿಷ್ಣು ಹುಟ್ಟಿದ್ದು ಮತ್ತು ಸತ್ತದ್ದು ಒಂದೇ (ಮೈಸೂರು) ನಗರದಲ್ಲಿ.
** ರಾಜ್ ಅವರ ಸಿನಿಮಾ ಜೀವನ ಆರಂಭವಾದದ್ದು 54ರಲ್ಲಿ (1954). ಅಂದರೆ 54: 5+4=9. ವಿಷ್ಣು ಚಿತ್ರಜೀವನ 72ರಲ್ಲಿ (1972) ಆರಂಭವಾಯಿತು. ಅಂದರೆ 72: 7+2=9.
** ತನ್ನ ಮೊದಲ ಚಿತ್ರದ 22 ವರ್ಷಗಳ ನಂತರ 1976ರಲ್ಲಿ ಮೈಸೂರು ಯುನಿವರ್ಸಿಟಿಯಿಂದ ರಾಜ್ ಗೌರವ ಡಾಕ್ಟರೇಟ್ ಪಡೆದರು. ತನ್ನ ಮೊದಲ ಚಿತ್ರದ 33 ವರ್ಷಗಳ ನಂತರ ಬೆಂಗಳೂರು ಯುನಿವರ್ಸಿಟಿಯಿಂದ 2005ರಲ್ಲಿ ವಿಷ್ಣು ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದರು.
PR
** ರಾಜ್ ಅವರ 100ನೇ ಚಿತ್ರ ಬಿಡುಗಡೆಯಾಗಿದ್ದು 1968ರಲ್ಲಿ. ವಿಷ್ಣು 100ನೇ ಚಿತ್ರ 1986ರಲ್ಲಿ ತೆರೆ ಕಂಡಿತ್ತು. ಇಲ್ಲೂ ಎರಡು ಅಂಕಿಗಳು ಆಚೀಚೆ (68 ಮತ್ತು 86) ಆಗಿರುವುದನ್ನು ಗಮನಿಸಬಹುದು.
** ರಾಜ್ ಮತ್ತು ವಿಷ್ಣು ಇಬ್ಬರೂ ತಮ್ಮ 100ನೇ ಸಿನಿಮಾ ತಲುಪಲು 14ಕ್ಕೂ ಹೆಚ್ಚು ವರ್ಷಗಳನ್ನು ತೆಗೆದುಕೊಂಡಿದ್ದರು ಎಂಬುದೂ ಗಮನಾರ್ಹ.
** ಇಬ್ಬರೂ ಹೃದಯ ಸ್ತಂಭನದಿಂದ ಸಾವನ್ನಪ್ಪಿದವರು. ರಾಜ್ 12ನೇ ದಿನ ಅಗಲಿದರೆ, ವಿಷ್ಣು 12ನೇ ತಿಂಗಳಲ್ಲಿ ನಮ್ಮನ್ನು ಬಿಟ್ಟು ಹೋದರು.
** ಕಂಠೀರವ ಸ್ಟುಡಿಯೋದಲ್ಲಿ (ಬೆಂಗಳೂರು ಉತ್ತರದಲ್ಲಿದೆ) ರಾಜ್ ಹಾಗೂ ಅಭಿಮಾನ್ ಸ್ಟುಡಿಯೋದಲ್ಲಿ (ಬೆಂಗಳೂರು ದಕ್ಷಿಣದಲ್ಲಿದೆ) ವಿಷ್ಣುವಿಗೆ ಅಂತ್ಯಸಂಸ್ಕಾರ ನಡೆಸಲಾಗಿದೆ.
** ರಾಜ್ (ಪಾರ್ವತಿ) ಮತ್ತು ವಿಷ್ಣು (ಭಾರತಿ) ಇಬ್ಬರ ಪತ್ನಿಯರ ಹೆಸರುಗಳಲ್ಲೂ 'ತಿ' ಅಕ್ಷರ ಮಹತ್ವದ ಪಾತ್ರವಹಿಸುತ್ತವೆ.
(ಮಾಹಿತಿ ಕಲೆ ಹಾಕಿದವರು: ಬೆಳ್ಳೂರ್ ರಾಮಕೃಷ್ಣ, ಕೃಪೆ: bellurramki18.wordpress.com)