ಯಶಸ್ವೀ ಜೋಶ್ ಚಿತ್ರವನ್ನು ನಿರ್ದೇಶಿಸಿದ ಶಿವಮಣಿ ಇನ್ನೂ ಆ ಚಿತ್ರದ ಗುಂಗಿನಿಂದ ಹೊರಬಂದಿಲ್ಲ. ಇದೇ ಖುಷಿಯಲ್ಲಿ ಅವರು ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಚಿತ್ರದ ಹೆಸರು ಗೋಕಾಕ್.
ವಿಶೇಷವೆಂದರೆ ಈ ಚಿತ್ರಕ್ಕೂ ಶಿವಮಣಿ ಹೊಸ ಹುಡುಗರ ಹುಡುಕಾಟದಲ್ಲಿದ್ದಾರೆ. ಜೋಶ್ ಚಿತ್ರಕ್ಕೆ ಪ್ರತಿಭಾ ಶೋಧ ಮಾಡಿದಂತೆ ಈ ಚಿತ್ರಕ್ಕೂ ಹಲವು ಜಿಲ್ಲೆಗಳಿಂದ ಪ್ರತಿಭೆಗಳನ್ನು ಶೋಧಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ ಅವರು.
ಈ ನಡುವೆ ತಮಿಳಿನಲ್ಲಿ ಜೋಶ್ ಚಿತ್ರವನ್ನು ರಿಮೇಕ್ ಮಾಡಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಮತ್ತೊಂದೆಡೆ ಗೋಕಾಕ್ ಚಿತ್ರದ ಓಡಾಟ. ಒಟ್ಟಾರೆ ಶಿವಮಣಿ ಪ್ರಸ್ತುತ ಭಾರೀ ಬ್ಯುಸಿ ನಿರ್ದೇಶಕ.