ಮಳೆ ಬೆಡಗಿ ಪೂಜಾ ಗಾಂಧಿ ಪ್ರಸ್ತುತ ನಟನೆಗೆ ಪುಟ್ಟ ವಿರಾಮ ಹೇಳಿದ್ದಾರಂತೆ. ಕೆಲ ದಿನಗಳ ಕಾಲ ಮನೆಯವರ ಜೊತೆ ಪ್ರವಾಸ ಹೊರಡಲು ಇದೀಗ ಅವರು ತೀರ್ಮಾನಿಸಿದ್ದಾರಂತೆ.
ಮಿನುಗು ಚಿತ್ರ ಬಿಡುಗಡೆ ಆದ ನಂತರ ಸದ್ಯಕ್ಕೆ ಪೂಜಾ ಯಾವ ಚಿತ್ರದಲ್ಲೂ ನಟಿಸುತ್ತಿಲ್ಲವಂತೆ. ಹೊಸ ಹುಡುಗರ ಸಹವಾಸ ಮಾತ್ರ ಬೇಡ ಎನ್ನುತ್ತಾರೆ ಅವರು. ಹೆಚ್ಚು ಆಫರ್ಗಳು ಬರುತ್ತಿವೆಯಾದರೂ, ಅವರಿಗೆ ಇಷ್ಟವಾಗುವಂಥ ಕಥೆಗಳು ದೊರಕುತ್ತಿಲ್ಲವೆಂಬುದೇ ಅವರಿಗೆ ಬೇಸರದ ಸಂಗತಿ. ಇನ್ನು ಮುಂದೆ ತುಂಬಾ ಯೋಚಿಸಿ ಉತ್ತಮ ಕಥೆಗಳನ್ನು ಮಾತ್ರ ಆಯ್ದುಕೊಳ್ಳುವ ನಿರ್ಧಾರ ಮಾಡಿರುವ ಪೂಜಾಗೆ ಸದ್ಯಕ್ಕೆ ಅಂಥ ಇಷ್ಟವಾಗುವ ಕಥೆಗಳು ಸಿಕ್ಕಿಲ್ಲವಂತೆ. ಹಾಗಾಗಿ ಬಿಡುವಿಲ್ಲದೆ, ಈವರೆಗೆ ಒಂದಾದ ಮೇಲೊಂದು ಚಿತ್ರಗಳಲ್ಲಿ ನಟಿಸಿ ಸುಸ್ತಾದ ಪೂಜಾ, ಇದೀಗ ಪೂರ್ಣ ಪ್ರಮಾಣದಲ್ಲಿ ಕೆಲಸವಿಲ್ಲದೆ ಆರಾಮವಾಗಿ ಅಪ್ಪ-ಅಮ್ಮನೊಂದಿಗೆ ಕಾಲ ಕಳೆಯುವ ನಿರ್ಧಾರ ಮಾಡಿದ್ದಾರಂತೆ.
ರಜೆಯನ್ನು ಮಸ್ತಾಗಿ ಮಜಾ ಮಾಡುವ ಪ್ಲಾನ್ ಮಾಡಿರುವ ಪೂಜಾ, ಸದ್ಯ ಪಾಂಡಿಚೇರಿಗೆ ತಮ್ಮ ಅಪ್ಪ, ಅಮ್ಮ, ಸಹೋದರಿ ರಾಧಿಕಾ ಜೊತೆಗೆ ಕೆಲ ದಿನಗಳ ಕಾಲ ಪ್ರವಾಸ ಮಾಡಲು ತೀರ್ಮಾನಿಸಿದ್ದಾರಂತೆ.