ಹೊಸಬರ ಹಿಂಡನ್ನು ಕಟ್ಟಿಕೊಂಡು ಹೊಸ ಚಿತ್ರಗಳನ್ನು ಮಾಡಿ ಗಾಂಧಿನಗರದಲ್ಲಿ ಸ್ವಲ್ಪ ಮಟ್ಟಿಗೆ ಹೆಸರು ಮಾಡಲು ಪ್ರಯತ್ನಿಸಿದ್ದ ನಿರ್ದೇಶಕ ರಾಜಶೇಖರ್ ಅವರನ್ನು ಇದೀಗ ತೆಲುಗು ಚಿತ್ರರಂಗ ಕೈಬೀಸಿ ಕರೆದಿದೆ.
ರಾಜಶೇಖರ್ ನಿರ್ದೇಶಿಸಿದ ಈ ಸಂಬಾಷಣೆ ಚಿತ್ರವನ್ನು ವೀಕ್ಷಿಸಿದ ತೆಲುಗು ವಾಹಿನಿಯಾದ ಮಾ ಟಿವಿ ಮಖ್ಯಸ್ಥ ಸುರೇಶ್, ಇದೇ ಚಿತ್ರಕ್ಕೆ ಸ್ವಲ್ಪ ಫೈಟಿಂಗ್ ಸೇರಿಸಿ, ನಾಗಾರ್ಜುನ್ ಅವರ ಪುತ್ರ ನಾಗಚೈತನ್ಯ ಅವರನ್ನು ಹಾಕಿಕೊಂಡು ತೆಲುಗಿನಲ್ಲಿ ಚಿತ್ರ ಮಾಡಿಕೊಡಬೇಕೆಂದು ರಾಜಶೇಖರ್ ಅವರನ್ನು ಕೇಳಿಕೊಂಡಿದ್ದಾರಂತೆ.
ತೆಲಂಗಾಣ ಗಲಭೆಯ ಹಿನ್ನೆಲೆಯಲ್ಲಿ ಇನ್ನೂ ಚಿತ್ರೀಕರಣಕ್ಕೆ ಕೈ ಹಾಕಿಲ್ಲ. ಇದೇ ಚಿತ್ರದ ನಡುವೆ ಮತ್ತೊಂದು ತೆಲುಗು ಚಿತ್ರ ಮಾಡಿಕೊಡಲು ಆಫರ್ ಬಂದಿದೆ ಎಂದು ರಾಜಶೇಖರ್ ಖುಷಿಖುಷಿಯಾಗಿ ಹೇಳುತ್ತಾರೆ.