ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತರುಣ್ ಸುಧೀರರ ತಾಂಡವ ನೃತ್ಯ (Tarun Sudheer | Choreography)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕನ್ನಡದ ಖ್ಯಾತ ಖಳನಟರಲ್ಲಿ ಒಬ್ಬರಾಗಿದ್ದ ಸುಧೀರ್ ಅವರ ಪುತ್ರ ತರುಣ್ ಸುಧೀರ್, ನೃತ್ಯ ನಿರ್ದೇಶಕ ಎಂಬುದು ಹಲವು ಮಂದಿಗೆ ತಿಳಿದಿರಲಿಕ್ಕಿಲ್ಲ.

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಚೆಲುವೆಯೇ ನಿನ್ನ ನೋಡಲು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದ ನೃತ್ಯ ಸಂಯೋಜನೆಯ ಸಂಪೂರ್ಣ ಹೊಣೆ ತರುಣ್ ಅವರ ಹೆಗಲ ಮೇಲಿತ್ತು. ಅವರು ತಮ್ಮ ಮೇಲಿದ್ದ ಭಾರವನ್ನು ಯಶಸ್ವೀಯಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕುಣಿದ ನಂತರ ಅವರಿಗೆ ಹಲವು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗುವಂತೆ ಆಫರ್‌ಗಳು ಬರುತ್ತಿವೆಯಂತೆ.

ವಿಶೇಷವೆಂದರೆ ಚೆಲುವೆಯೇ ನಿನ್ನ ನೋಡಲು ಚಿತ್ರದಲ್ಲಿ ತರುಣ್ ಅಭಿನಯಿಸಿದ್ದಾರಂತೆ. ಇದು ಅವರ ನಟನಾ ಜೀವನಕ್ಕೆ ತಿರುವು ನೀಡಲಿದೆ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. ಏನಕ್ಕೂ ಕಾದು ನೋಡದೆ ವಿಧಿಯಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತರುಣ್ ಸುಧೀರ್, ಚೆಲುವೆಯೇ ನಿನ್ನ ನೋಡಲು