ವಿಷ್ಣುವರ್ಧನ್ ಅಗಲಿಕೆಯಿಂದ ಹಿರಿಯ ನಟ ಉಮೇಶ್ ಅವರಿಗೆ ಅರಗಿಸಿಕೊಳ್ಳಲಾಗದಷ್ಟು ದುಃಖ ಆಗಿದೆಯಂತೆ. ನಾಗರಹೊಳೆ ಚಿತ್ರದಿಂದ ನಮ್ಮೆಜಮಾನ್ರು ಚಿತ್ರದ ತನಕ ಉಮೇಶ್ ಅವರು ಸಾಹಸಸಿಂಹನೊಂದಿಗೆ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರೀಕರಣವೊಂದರಲ್ಲಿ ಉಮೇಶ್ ತಾವು ಬರೆದಿದ್ದ ಬೊಂಬೆಯಾಟವಯ್ಯ ಕೃತಿಯನ್ನು ವಿಷ್ಣುಗೆ ನೀಡಿದ್ದರಂತೆ. ಅದನ್ನು ಕಂಡು ಸಾಹಸಸಿಂಹನಿಗೆ ಬಹಳ ಮೆಚ್ಚುಗೆ ಆಗಿತ್ತಂತೆ. ಕೃತಿ ಕೊಟ್ಟ ದಿನವೇ ಉಮೇಶ್ ಅವರ ಜನ್ಮದಿನವಾಗಿತ್ತಂತೆ. ಹೇಗೋ ಅದನ್ನು ಅರಿತ ವಿಷ್ಣು, ದೊಡ್ಡ ಕೇಕ್ ತರಿಸಿ ಶೂಟಿಂಗ್ ಸ್ಪಾಟಿನಲ್ಲಿಯೇ ಹಲವು ಕಲಾವಿದರ ಸಮ್ಮುಖದಲ್ಲಿ ಉಮೇಶ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರಂತೆ.
ಯಾವಾಗಲೂ ಹುಟ್ಟುಹಬ್ಬ ನೆನಪೇ ಆಗದ ನನಗೆ ಅಂದಿನ ಹುಟ್ಟುಹಬ್ಬದ ಆಚರಣೆ ಯಾವಾಗಲೂ ನೆನಪಾಗುತ್ತದೆ ಎಂದು ಉಮೇಶ್ ಭಾವುಕರಾಗುತ್ತಾರೆ ಉಮೇಶ್.