ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೂರರ ಹರೆಯರ ವಿಜಯ್ ಮಗನೂ ಸಿನಿಮಾರಂಗಕ್ಕೆ!? (Vijay | Sandalwood | Duniya)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ದುನಿಯಾ ಖ್ಯಾತಿಯ ವಿಜಯ್ ಇತ್ತೀಚೆಗೆ ಜಿಮ್‌ನಲ್ಲಿ ಅಭ್ಯಾಸದಲ್ಲಿ ತೊಡಗಿದ್ದರು. ಇದರಲ್ಲೇನೂ ವಿಶೇಷ ಖಂಡಿತಾ ಇಲ್ಲ. ಸಿಕ್ಸ್ ಪ್ಯಾಕ್‌ಗಾಗಿ, ಕಟ್ಟುಮಸ್ತಾದ ದೇಹಕ್ಕಾಗಿ ವಿಜಯ್ ಮಾಡದ ಕಸರತ್ತು ಇನ್ನೇನಿಲ್ಲ. ಆದರೆ ಈ ಬಾರಿ ಜಿಮ್‌ನಲ್ಲಿ ವಿಜಯ್ ಜೊತೆಗೆ ಆತನ ಪುಟಾಣಿ ಪುತ್ರ ಸಾಮ್ರಾಟ್ ಕೂಡಾ ಇದ್ದ. ಈ ಪುಟಾಣಿ ಪೋರ ಜಿಮ್ಮಿನಲ್ಯಾಕೆ ಅಂತೀರಾ? ಅಪ್ಪನ ಜೊತೆಗೆ ಸಿನಿಮಾದಲ್ಲಿ ನಟಿಸುವ ಬಗ್ಗೆ ಈಗಲೇ ಈ ಮೂರರ ಹರೆಯದ ಪೋರ ಸಾಮ್ರಾಟ್ ಉತ್ಸಾಹ ತೋರಿಸುತ್ತಿದ್ದಾನಂತೆ. ವಿಜಯ್ ಕೂಡಾ ಮಗನಿಗೆ ಜಿಮ್ಮಿನಲ್ಲಿ ದೇಹ ಬೆಳೆಸಿಕೊಳ್ಳುವ ಕಲೆ, ನಟನೆ ಎಲ್ಲವನ್ನೂ ಕಲಿಸುತ್ತಿದ್ದಾರಂತೆ. ಈ ವರ್ಷದಲ್ಲಿ ಅಪ್ಪ ಹಾಗೂ ಮಗ ತೆರೆಯ ಮೇಲೆ ಜೊತೆಯಾಗಿ ಬರಲಿದ್ದಾರಂತೆ!

ಹೌದು. ವಿಜಯ್ ಸ್ವತಃ ತಮ್ಮ ಮಗನಿಗೆ ನಟನೆಗೆ ಪ್ರೋತ್ಸಾಹ ನೀಡತ್ತಿದ್ದಾರೆ. ಮಕ್ಕಳ ದೇಹ ಈ ಸಂದರ್ಭ ಯಾವುದಕ್ಕೆ ಬೇಕಾದರೂ ಒಗ್ಗುತ್ತದೆ. ಆತನಿಗೆ ಈಗಲೇ ಜಿಮ್ ಬಗ್ಗೆ ಗೊತ್ತು. ಫೈಟಿಂಗ್ ಮಾಡೋದು ಗೊತ್ತು. ದುನಿಯಾ, ಜಗ್ಲಿ ಚಿತ್ರಗಳನ್ನು ನೋಡಿ ತುಂಬಾ ಖುಷಿ ಪಟ್ಟಿದ್ದಾನೆ. ಮಕ್ಕಳಿಗೆ ಸಣ್ಮ ವಯಸ್ಸಿನಲ್ಲಿ ಎಲ್ಲವನ್ನೂ ಸ್ವೀಕರಿಸುವ, ಕಲಿಯುವ ಗುಣ ಇರುತ್ತದೆ. ಅದಕ್ಕೆ ಪ್ರೋತ್ಸಾಹ ನೀಡಬೇಕು. ನಾನು ಸಣ್ಣವನಿದ್ದಾಗ ನನಗೆ ಇಂಥದ್ದಕ್ಕೆಲ್ಲ ಅವಕಾಶವೇ ಇರಲಿಲ್ಲ. ಪ್ರೋತ್ಸಾಹ ನೀಡುವವರೂ ಇರಲಿಲ್ಲ. ಈಗ ನನ್ನ ಮಗನಿಗೆ ಹಾಗಲ್ಲ. ಆತನಿಗೆ ತರಬೇತಿ ನೀಡಲು, ಪ್ರೋತ್ಸಾಹ ನೀಡಲು ನಾನಿದ್ದೇನೆ ಎನ್ನುತ್ತಾರೆ ವಿಜಯ್.

ಸಾಮ್ರಾಟ್‌ಗೆ ಕ್ಯಾಮರಾ ಮುಂದೆ ನಿಂತು ಅಭಿನಯ ಮಾಡೋದು ಎಲ್ಲ ಇಷ್ಟ. ಆತನಿಗೆ ಭಯವಿಲ್ಲ. ಅಂತಹ ಆಸಕ್ತಿ ಅವನಲ್ಲಿರುವಾಗ ನಾನದಕ್ಕೆ ಪ್ರೋತ್ಸಾಹ ನೀಡಲೇಬೇಕು. ಆತ ನನಗಿಂತ ದೊಡ್ಡ ನಟನಾಗಬೇಕು. ನಟನೆ ಎಂದರೇನೆಂಬುದೇ ತಿಳಿಯದೆ ಕ್ಯಾಮರಾ ಮುಂದೆ ನಿಲ್ಲುವ ಪರಿಸ್ಥಿತಿ ಆತನಿಗೆ ಬರಬಾರದು. ಎಲ್ಲ ಕಲಿತು ಪಕ್ವವಾಗಿ ಕ್ಯಾಮರಾ ಎದುರಿಸಬೇಕು. ಆತ 18 ವರ್ಷದವನಾದಾಗ ಆತ ಎಲ್ಲದರಲ್ಲೂ ಪಳಗಬೇಕು. ಅದೇ ನನ್ನಾಸೆ ಎನ್ನುತ್ತಾರೆ ವಿಜಯ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಜಯ್, ಸಾಮ್ರಾಟ್, ದುನಿಯಾ