ಕನ್ನಡಿಗರನ್ನು ಅಗಲಿ ದೂರಾದ ನಟ ವಿಷ್ಣುವರ್ಧನ್, ಹಾಡುಗಾರ ಸಿ.ಅಶ್ವಥ್ ಸೇರಿದಂತೆ ನಿರ್ಮಾಪಕ ಚಂದೂಲಾಲ್ ಜೈನ್ ಹಾಗೂ ಸಾಹಸ ಕಲಾವಿದ ಸರ್ಕಸ್ ಬೋರಣ್ಣ ಅವರುಗಳಿಗೆ ಚಿತ್ರರಂಗ ಹಾಗೂ ರಾಜಕೀಯರಂಗದ ಗಣ್ಯರು ಶ್ರದ್ದಾಂಜಲಿ ಅರ್ಪಿಸಿದರು.
ವಿಷ್ಣು ಅವರಿಗೆ ಶ್ರದ್ಧಾಂಜಲಿ ಅರ್ಪಸುವ ಸಂದರ್ಭ ಕಣ್ತುಂಬಿ ಬಂದ ನಟ ದ್ವಾರಕೀಶ್, ನಾವು ಈವರೆಗೆ ಪದೇ ಪದೇ ಜಗಳವಾಡಿಕೊಂಡಿದ್ದರೂ, ಉತ್ತಮ ಸ್ನೇಹಿತರಾಗಿಯೇ ಇದ್ದೆವು ಎಂದು ಭಾವುಕರಾದರು. ಸಿ. ಅಶ್ವಥ್ ಅವರ ಕಂಠ ಮತ್ತೆಂದೂ ಹುಟ್ಟಿ ಬರಲು ಸಾಧ್ಯವಿಲ್ಲ ಎಂದು ನಟ ಶ್ರೀನಾಥ್ ದುಃಖದಿಂದ ನುಡಿದರು.
MOKSHA
ಕನ್ನಡ ಚಿತ್ರರಂಗಕ್ಕಾಗಿ ದುಡಿದು ಮಡಿದ ಈ ಮಿನುಗು ತಾರೆಗಳಿಗೆ ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರ್ ಸಭಾಂಗಣದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ಅನಂತಕುಮಾರ್, ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಚಿತ್ರರಂಗದಿಂದ ವಿಷ್ಣು ಅವರ ಖಾಸಾ ದೋಸ್ತ್ ಆಗಿದ್ದ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಾಗಾಭರಣ, ಉಮೇಶ್, ಬ್ಯಾಂಕ್ ಜನಾರ್ಧನ್, ರಾಜೇಂದ್ರ ಸಿಂಗ್ ಬಾಬು, ಅಳಿಯ ಹಾಗೂ ನಟ ಅನಿರುದ್ಧ, ಅಜಯ್, ಜಯಂತಿ, ಉಮಾಶ್ರೀ, ಬಿ.ಸರೋಜಾದೇವಿ, ತಾರಾ, ಐಂದ್ರಿತಾ ರೇ ಸೇರಿದಂತೆ ಹಲವು ನಟ ನಟಿಯರು ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿ ಹಿರಿಯ ಚೇತನಗಳಿಗೆ ಅಶ್ರುತರ್ಪಣ ಮಿಡಿದರು.