ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಈ ತಿಂಗಳು ಚಿತ್ರ ಬಿಡುಗಡೆಗೆ ಭಾರೀ ಜಟಾಪಟಿ (Just Math Mathali | Sugreeva | Sooryakanthi | Porki)
ಸುದ್ದಿ/ಗಾಸಿಪ್
Bookmark and Share Feedback Print
 
Just Math Mathali
MOKSHA
ನಮ್ಮ ಕನ್ನಡದ ನಿರ್ಮಾಪಕರುಗಳಿಗೆ ಅದ್ಯಾವ ಜ್ಯೋತಿಷಿ ಅದೇನು ಹೇಳಿದನೋ ತಿಳಿಯದು. ಇದೇ ತಿಂಗಳಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಬೇಕೆಂದು ನಿರ್ಮಾಪಕರು ಪಣ ತೊಟ್ಟು ಕುಳಿತಿದ್ದಾರಂತೆ.

ಈ ಸಂಕ್ರಾತಿಗೆ ಮೂರು ಚಿತ್ರಗಳು ಬಿಡುಗಡೆಯಾಗಲು ಪೈಪೋಟಿ ನಡೆಸುತ್ತಿವೆಯಂತೆ. ಚೇತನ್ ನಾಯಕನಾಗಿ ನಟಿಸಿರುವ ಸೂರ್ಯಕಾಂತಿ, ಅಣಜಿ ನಾಗರಾಜ್ ಅವರ ಸುಗ್ರೀವ ಮತ್ತು ದರ್ಶನ್ ಅಭಿನಯದ ಪೋರ್ಕಿ ಚಿತ್ರಗಳು ಚಿತ್ರ ಮಂದಿರಗಳನ್ನು ತಮ್ಮದಾಗಿಸಿಕೊಳ್ಳಲು ಪರದಾಡುತ್ತಿವೆಯಂತೆ. ಈ ನಡುವೆ ಹೂ ಚಿತ್ರದ ನಿರ್ಮಾಪಕರು ತಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕೇ ಅಥವಾ ಬೇಡವೇ ಎಂಬ ಚಿಂತೆಯಲ್ಲಿದ್ದಾರಂತೆ.

ಯಾರು ಎನೇ ಹೇಳಲಿ ಸುದೀಪ್ ಮಾತ್ರ ತಮ್ಮ ಜಸ್ಟ್ ಮಾತ್ ಮಾತಲಿ ಚಿತ್ರವನ್ನು ಇದೇ ತಿಂಗಳ 22ಕ್ಕೆ ಬಿಡುಗಡೆ ಮಾಡಲೇಬೇಕೆಂದು ನಿರ್ಧರಿಸಿದ್ದಾರಂತೆ. ಅವರು ಈ ಹಿಂದೆ ರಜನಿಯ ಶಿವಾಜಿ ಚಿತ್ರ ಬಿಡುಗಡೆಯಾದ ಸಮಯದಲ್ಲೇ ತಮ್ಮ ಶಾಂತಿ ನಿವಾಸ ಚಿತ್ರವನ್ನು ಬಿಡುಗಡೆ ಮಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೂರ್ಯಕಾಂತಿ, ಜಸ್ಟ್ ಮಾತ್ ಮಾತಲಿ, ಸುಗ್ರೀವ, ಪೊರ್ಕಿ