ಹಾಲಿವುಡ್ ಮಂದಿ ಪ್ರಳಯವನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರ ಮಾಡಿ ಯಶಸ್ವಿಯಾದರು. ಇದೀಗ ನಮ್ಮ ಕನ್ನಡದಲ್ಲೂ ಅಂಥದ್ದೇ ಪ್ರಳಯಾಂತಕ ಯೋಜನೆ ತಯಾರಾಗುತ್ತಿದೆ.
ಆದರೆ ಇದು ಸಾಮಾಜಿಕ ಕಳಕಳಿಯ ಚಿತ್ರವಂತೆ. 2012ಕ್ಕೆ ಪ್ರಳಯ ಸಂಭವಿಸುತ್ತದೆ ಎಂಬ ಸುದ್ದಿ ಜನರ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಸಂಶೋಧಿಸಿ ಆನಂತರ ಚಿತ್ರ ಮಾಡಲಾಗುತ್ತದೆ ಎಂಬುದು ನಿರ್ದೇಶಕರು ಹೇಳುವ ಸುದ್ದಿ.
ಅಂದಹಾಗೆ, ಚಿತ್ರಕ್ಕಿಟ್ಟ ಹೆಸರು 2012 ಪ್ರಳಯ ಆಗುತ್ತಾ? ಹೀಗೊಂದು ಶೀರ್ಷಿಕೆನ್ನಿಟ್ಟುಕೊಂಡು ಚಿತ್ರ ಮಾಡಲು ಹೊರಟವರು ನಿರ್ದೇಶಕ ಶರಣ್ ಗಬ್ಬೂರ್. ಪ್ರಳಯ ಆಗುತ್ತೋ ಬಿಡುತ್ತೋ, ಆದರೆ ತಮ್ಮ ಚಿತ್ರ ಮಾತ್ರ ಹಿಟ್ ಆಗುತ್ತೆ ಎನ್ನುತ್ತಾರೆ ಶರಣ್. ನಿರ್ಮಾಪಕರಿಗೆ ಸದ್ಯಕ್ಕೆ ಬೇಕಾದ್ದೂ ಅದೇ. ಹಾಗಾಗಿಯೋ ಏನೋ ಚಿತ್ರಕ್ಕೆ ಇಂತಹ ಶೀರ್ಷಿಕೆ ಇಟ್ಟಿದ್ದಾರೋ, ಏನೋ.. ಪರಮಾತ್ಮನಿಗೇ ಗೊತ್ತು ಎನ್ನುತ್ತಾರೆ ಗಾಂಧಿನಗರಿಯ ಮಂದಿ.