ಸೈಕೋ ಚಿತ್ರದಲ್ಲಿ ಭರ್ಜರಿ ಸಂಗೀತ ನೀಡಿದ್ದ ರಘು ದೀಕ್ಷಿತ್ ಅವರಿಗೆ ಅದೇ ಚಿತ್ರದ ನಿನ್ನ ಪೂಜೆಗೆ ಬಂದೆ ಮಾದೇಶ್ವರಾ ಎಂಬ ಹಾಡು ಇದೀಗ ಅವರಿಗೆ ಅಲರ್ಜಿಯಾಗಿಬಿಟ್ಟಿದೆಯಂತೆ.
ಎಲ್ಲಿಗೆ ಹೋದರೂ ರಘು ಅವರ ಬಳಿ ಜನರು ಅದನ್ನೇ ಹಾಡಿ ಎಂದು ಬೆನ್ನು ಬೀಳುತ್ತಿದ್ದಾರಂತೆ. ಯಾವುದೇ ಕಾರ್ಯಕ್ರಮಕ್ಕೂ ಹೊದರೂ ರಘು ಮೊದಲು ಆ ಹಾಡನ್ನು ಹಾಡಬೇಕಂತೆ. ಅಲ್ಲಿ ನೆರೆದವರು ಆ ನಂತರ ಉಳಿದ ಮಾತು, ಸಂಗೀತಕ್ಕೆ ಆಸ್ಪದ ನೀಡುತ್ತಾರಂತೆ. ಹೀಗಾಗಿ ಕಾರ್ಯಕ್ರಮಗಳಲ್ಲಿ ಮಾದೇಶ್ವರಾ ಅಂತ ಹಾಡು ಹಾಡಿ ಹಾಡಿ ಸಾಕು ಸಾಕಾಗಿದೆಯಂತೆ!
ಇದರಿಂದ ಬೇಸತ್ತ ಅವರು ಇನ್ನು ಮುಂದೆ ಯಾವ ಸಮಾರಂಭಗಳಿಗೂ ಹೋಗಬಾರದು ಎಂದು ತೀರ್ಮಾನಿಸಿಬಿಟ್ಟಿದ್ದಾರಂತೆ. ಅದೆಷ್ಟು ಹಾಡು, ಟ್ಯೂನ್‌ಗಳು ಅವರ ತಲೆಯಲ್ಲಿದೆಯೋ ಎನೋ. ಅದ್ಯಾವುದನ್ನು ಉಸಿರು ಎತ್ತಬಾರದು, ಬರಿ ಮಹದೇಶ್ವರನ ಹಾಡನ್ನೇ ಹಾಡಬೇಕು ಎಂದು ಅವರ ಸಂಗೀತ ಪ್ರಿಯರು ದುಂಬಾಲು ಬಿದ್ದಿರುವುದೇ ಇವರ ಈ ನಿರ್ಧಾರಕ್ಕೆ ಕಾರಣವಂತೆ. ಪಾಪ ಎನ್ನೋಣವೇ.