ಮಾತು ಮುಗಿಸಿದ ಹೆಂಡ್ತೀರು
ವರವು ಎತ್ತಣ ಸೆಲವು ಪತ್ತಣ ಚಿತ್ರ ತಮಿಳಿನಲ್ಲಿ ಯಶಸ್ವೀ ಪ್ರದರ್ಶನ ಕಂಡ ಚಿತ್ರ. ಇದನ್ನು ಕನ್ನಡದಲ್ಲಿ ಹೆಂಡ್ತೀರ್ ದರ್ಬಾರ್ ಹೆಸರಲ್ಲಿ ಕಲಾವಿದ, ನಿರ್ಮಾಪಕ ಜಿ.ರಾಮಚಂದ್ರನ್ ನಿರ್ಮಿಸುತ್ತಿದ್ದಾರೆ.ರಾಮಚಂದ್ರನ್ ಈಗಾಗಲೇ, ತೆಲುಗಿನಲ್ಲಿ 5 ಚಿತ್ರಗಳನ್ನು ನಿರ್ಮಿಸಿದ್ದಾರೆ. ತಮಿಳು, ತೆಲುಗು ಚಿತ್ರದಲ್ಲಿ ತಮ್ಮ ಕೈಚಳಕ ಪ್ರದರ್ಶಸಿದ್ಧ ನಿರ್ದೇಶಕ ವಿ.ಶೇಖರ್ ಹೆಂಡ್ತೀರ್ ದರ್ಬಾರ್ ಚಿತ್ರವನ್ನು ಮಾಡಲಿದ್ದಾರೆ.ಸಂಸಾರದಲ್ಲಿ ಆದಾಯಕ್ಕಿಂತ ಮೀರಿ ಖರ್ಚು ಮಾಡಿಕೊಂಡರೆ ಎಷ್ಟೆಲ್ಲಾ ತೊಂದರೆ ಎದುರಿಸಬೇಕಾಗುತ್ತದೆ ಎಂಬುದನ್ನು ಸಂಸಾರವೊಂದರ ಮೂಲಕ ಹಾಸ್ಯ ಮಿಶ್ರಿತವಾಗಿ ಶೇಖರ್ ಈ ಚಿತ್ರದ ಮೂಲಕ ನಿರೂಪಿಸುತ್ತಿದ್ದಾರೆ.ಈಗಾಗಲೇ ಬೆಂಗಳೂರು ಸುತ್ತ ಮುತ್ತ 30 ದಿನಗಳ ಕಾಲ ಚಿತ್ರೀಕರಿಸಿ, ಮಾತಿನ ಭಾಗವನ್ನು ಸಂಪೂರ್ಣಗೊಳಿಸಿದ್ದಾರೆ. ಸದ್ಯದಲ್ಲೇ ಹಾಡುಗಳ ಚಿತ್ರೀಕರಣ ಮಾಡಲಿದ್ದಾರಂತೆ. ಚಿತ್ರದಲ್ಲಿ ರಮೇಶ್ ಅರವಿಂದ್, ಮೀನಾ ನಟಿಸುತ್ತಿದ್ದಾರೆ.