ಲೂಸ್ ಮಾದ ಯೋಗಿಯ ಮತ್ತೊಂದು ರಿಮೇಕ್ ಚಿತ್ರ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಪುಂಡ ಚಿತ್ರ, ಸಂಕ್ರಾತಿಗೆ ಬಿಡುಗಡೆಯಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ. ಇದು ತಮಿಳು ಚಿತ್ರವೊಂದರ ರಿಮೇಕ್.
ತಮಿಳಿನಂತೆ ಈ ಚಿತ್ರವನ್ನು ಯಥಾವತ್ತು ಭಟ್ಟಿ ಇಳಿಸಿಲ್ಲ ಎಂಬುದು ನಿರ್ದೇಶಕ ವಾಸು ಅವರ ಆಂಬೋಣ. ಚಿತ್ರವನ್ನು ಎಲ್ಲೂ ಬೋರ್ ಆಗದಂತೆ ತೆಗೆದುಕೊಡು ಹೋಗಲಾಗಿದೆಯಂತೆ. ಯೋಗಿ ಅಭಿಮಾನಿಗಳಿಗೆ ಬೇಕಾದ ಎಲ್ಲಾ ವಿಷಯಗಳನ್ನು ಚಿತ್ರದಲ್ಲಿ ತುರುಕಲಾಗಿದೆಯಂತೆ.
ರಾತ್ರಿ ವೇಳೆಯ ಚಿತ್ರೀಕರಣ ಮತ್ತು ಬೈಕ್ ಚೇಸಿಂಗ್ ಪುಂಡ ಚಿತ್ರದ ಹೈಲೈಟ್ ಎನ್ನುತ್ತಾರೆ ವಾಸು. ನಟಿ ಮೇಘನಾರಾಜ್ ಕೂಡ ಅದ್ಬುತವಾಗಿ ನಟಿಸಿದ್ದಾರೆ ಎಂದೂ ಸರ್ಟಿಫಿಕೇಟ್ ನೀಡುತ್ತಾರೆ ನಿರ್ದೇಶಕರು. ಒಟ್ಟಾರೆ ಮೇಘನಾ ರಾಜ್‌ಗೆ ಇದು ಕನ್ನಡದಲ್ಲಿ ಅಗ್ನಿಪರೀಕ್ಷೆ.