ಹರಿಕೃಷ್ಣ ಅವರ ಮಧುರ ಸಂಗೀತ ಕೆಲವೊಮ್ಮೆ ಬಹಳ ಇಷ್ಟವಾಗುತ್ತದೆ. ಕಳೆದ ವರ್ಷವಿಡೀ ಗಾಂಧಿನಗರದಲ್ಲಿ ಹರಿಕೃಷ್ಣ ಸಕತ್ ಶೈನಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಮಳೆಯಲಿ ಜೊತೆಯಲಿ ಚಿತ್ರಕ್ಕೆ ಹರಿಕೃಷ್ಣ ನೀಡಿದ ಸಂಗೀತಕ್ಕೆ ಕೇಳುಗರು ವಾಹ್.. ಎಂದಿದ್ದರು. ಅದಕ್ಕೂ ಮೊದಲು, ರಾಜ್, ಜಂಗ್ಲಿಯಲ್ಲೂ ಹರಿಕೃಷ್ಣ ಮೋಡಿ ಮಾಡಿದ್ದರು. ಒಂದು ವರ್ಷದಲ್ಲಿ ಹತ್ತು ಸಿನಿಮಾಗಳಿಗೆ ಸಂಗೀತ ನೀಡಿದ ಖ್ಯಾತಿ ಹರಿಕೃಷ್ಣ ಅವರದ್ದು.
ಅದೆಲ್ಲಾ ಹಾಗಿರಲಿ. ಅಂದ ಹಾಗೆ ಹರಿಕೃಷ್ಣ ಈಗ ಚಾಲಾಕಿ ಎಂಬ ಹೆಸರಿನ ಚಿತ್ರವೊಂದಕ್ಕೆ ಸಂಗೀತ ನೀಡಲು ಆಯ್ಕೆಯಾಗಿದ್ದಾರೆ. ಚಾಲಾಕಿ ಕನ್ನಡದ ಚಿತ್ರ ಎಂದುಕೊಂಡರೆ ಅದು ತಪ್ಪು. ಇದು ಅಪ್ಪಟ ತೆಲುಗು ಚಿತ್ರ. ಅಂತೂ ಕನ್ನಡದ ನಿರ್ದೇಶಕರೊಬ್ಬರು ಹೊರರಾಜ್ಯದ ಚಿತ್ರವೊಂದಕ್ಕೆ ಸಂಗೀತ ನೀಡಲು ಹೊರಟಿರುವುದು ಸಂತೋಷದ ಸಂಗತಿ. ಯಶಸ್ಸು ಸಾಧಿಸಲಿ ಎಂದು ಹರಸೋಣ.