ಶಿಶಿರ ಚಿತ್ರದ ನಿರ್ದೇಶಕ ಮಂಜು ಸ್ವರಾಜ್ ಗಾಂಧಿನಗರದ ದೊಡ್ಡ ತಲೆಗಳ ಬೇಜವಾಬ್ದಾರಿಯನ್ನು ಕಂಡು ಬೇಸರಗೊಂಡಿದ್ದಾರಂತೆ. ತಮ್ಮ ಶಿಶಿರ ಚಿತ್ರವನ್ನು ನೋಡಬನ್ನಿ ಎಂದು ಮಂಜು ಪ್ರೀತಿಯ ಆಹ್ವಾನವಿತ್ತಾಗ ಗಾಂಧಿನಗರದ ಮಂದಿ ಸ್ಪಂದಿಸಲಿಲ್ಲವಂತೆ. ಸಿನಿಮಾ ಕುರಿತು ನೀತಿ ನಿಯಮ ರೂಪಿಸುವವರೇ ಆ ನಿಯಮಗಳನ್ನು ಪಾಲಿಸುತ್ತಿಲ್ಲ. ಹೊಸಬರು ಮುಂದೆ ಬರಬೇಕು, ಅದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಹೋದಹೋದಲ್ಲಿ ಭಾಷಣ ಬಿಗಿಯುತ್ತಾರೆಯೇ ಹೊರತು. ಮತ್ತೇನನ್ನೂ ಮಾಡುವುದಿಲ್ಲ ಎಂದು ಅವರು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.
ಶಿಶಿರ ಒಂದು ಹೊಸ ಪ್ರಯತ್ನ ಅದನ್ನು ಉದ್ಯಮ ಬೆಂಬಲಿಸಬೇಕು. ಆದರೆ ಪ್ರತಿಯೊಬ್ಬರೂ ಉಡಾಫೆಯ ಮಾತುಗಳನ್ನಾಡುತ್ತಾರೆ ಎನ್ನುತ್ತಾರೆ ಮಂಜು. ಖ್ಯಾತ ನಟನಟಿಯರನ್ನು ಆಹ್ವಾನಿಸಿದಾಗ ಬೇಜವಾಬ್ದಾರಿಯಿಂದ ಮಾತನಾಡಿದರೆ ಮತ್ತೆ ಕೆಲವರು ಫೋನ್ ಕಟ್ ಮಾಡುತ್ತಾರಂತೆ. ಒಟ್ಟಾರೆ ಮಂಜುಗೆ ಇದರಿಂದ ಒಂದು ಸತ್ಯ ತಿಳಿದಿದೆಯಂತೆ. ಅದೇನೆಂದರೆ, ನಮ್ಮವರಿಗೆ, ನಮ್ಮನ್ನು ಆಳುತ್ತಿರುವವರಿಗೆ ಹೊಸ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಮನಸ್ಸಿಲ್ಲ ಎಂಬುದು.