ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣು ಅವರ ಆಪ್ತರಕ್ಷಕ, ಸ್ಕೂಲ್ ಮಾಸ್ಟರ್ ಹಾಡುಗಳ ಬಿಡುಗಡೆ (Aptharakshaka | Vishnuvardhan | Krishna Prajwal)
ಸುದ್ದಿ/ಗಾಸಿಪ್
Bookmark and Share Feedback Print
 
School Master
MOKSHA
ಸಾಹಸ ಸಿಂಹ ವಿಷ್ಣುವರ್ಧನ್ ಅವರ 200ನೇ ಚಿತ್ರ ಆಪ್ತರಕ್ಷಕದ ಹಾಡುಗಳ ಬಿಡುಗಡೆ ಸಮಾರಂಭ ಸದ್ದಿಲ್ಲದೆ ಮುಗಿದುಹೋಗಿದೆ. ಯಾವುದೇ ಆಡಂಬರಗಳಿಲ್ಲದೆ ಈ ಕಾರ್ಯಕ್ರಮವನ್ನು ಮುಗಿಸಲಾಗಿದೆ. ಯಾಕೆಂದರೆ, ವಿಷ್ಣು ಅವರ ಅಕಾಲ ಮರಣ.

ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ಮಾಡಬೇಕು ಎಂದುಕೊಂಡಿದ್ದರಂತೆ ಆಪ್ತರಕ್ಷಕ ಚಿತ್ರದ ನಿರ್ಮಾಪಕ ಕೃಷ್ಣ ಪ್ರಜ್ವಲ್. ಆದರೆ ವಿಧಿ ಅದಕ್ಕೆ ಆಸ್ಪದ ಕೊಡಲಿಲ್ಲ.

ಇದೀಗ ಈ ಚಿತ್ರದ ಹಾಡುಗಳನ್ನು ಸಜ್ಜನ್ ರಾವ್ ವೃತ್ತದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತುಂಬಾ ಸರಳವಾಗಿ ಬಿಡುಗಡೆ ಮಾಡಿ ಸಾಹಸ ಸಿಂಹನ ಅಭಿಮಾನಿಗಳಿಗೆ ಅರ್ಪಿಸಲಾಯಿತು.

ಪ್ರಸ್ತುತ ಆಪ್ತರಕ್ಷಕನ ಪ್ರಥಮ ಪ್ರತಿ ಸಿದ್ಧವಾಗಿದ್ದು, ಸೆನ್ಸಾರ್ ಕಚೇರಿಯಲ್ಲಿದೆ. ಜನವರಿ 22ರಂದು ಈ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ನಿರ್ಮಾಪಕರು ಅಂದುಕೊಂಡಿದ್ದಾರೆ.

ಸ್ಕೂಲ್ ಮಾಸ್ಟರ್: ವಿಷ್ಣುವರ್ಧನ್ ಅಭಿನಯದ ಇನ್ನೊಂದು ಚಿತ್ರ ಸ್ಕೂಲ್ ಮಾಸ್ಟರ್. ಈ ಚಿತ್ರದ ಅಡಿಯೋ ಕ್ಯಾಸೆಟ್ ಕೂಡಾ ಇತ್ತೀಚೆಗೆ ಬಿಡುಗಡೆಗೊಂಡಿತು. ಚಿತ್ರದಲ್ಲಿ ವಿಷ್ಣುವರ್ಧನ್‌ಗೆ ನಾಯಕಿಯಾಗಿ ಸುಹಾಸಿನಿ ಅಭಿನಯಿಸಿದ್ದಾರೆ. ಚಿತ್ರವನ್ನು ಸಿ.ಆರ್.ಮನೋಹರ್ ನಿರ್ಮಿಸಿದ್ದು, ಇದೂ ಕೂಡಾ ಸದ್ಯದಲ್ಲೇ ಹೊರಬರಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಪ್ತರಕ್ಷಕ, ವಿಷ್ಣುವರ್ಧನ್, ಕೃಷ್ಣ ಪ್ರಜ್ವಲ್