ಅಪ್ಪಿ ತಪ್ಪಿ ಸೆನ್ಸಾರ್ ಮಂಡಳಿ ಚಿತ್ರವೊಂದಕ್ಕೆ ಎ ಅರ್ಹತಾ ಪ್ರಮಾಣ ಪತ್ರ ನೀಡಿಬಿಟ್ಟರೆ, ಆ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ನಖಶಿಕಾಂತ ಉರಿದು ಹೋಗುತ್ತಾರೆ. ಈ ಹಿಂದೆ ಮೊಗ್ಗಿನ ಮನಸ್ಸು ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಲಾಗಿತ್ತು. ಇದರಿಂದ ಸಿಟ್ಟಾದ ನಿರ್ಮಾಪಕ ಈ ಕೃಷ್ಣಪ್ಪ ಕಾನೂನಿನ ಮೊರೆ ಹೋಗಿ ಯು/ಎ ಪ್ರಮಾಣಪತ್ರ ಪಡೆದು ತಂದಿದ್ದರು. ಆಮೇಲೆ ಚಿತ್ರ ಹಿಟ್ ಆಗಿ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ಹಳೇ ಕಥೆ.
ಸುನಾಮಿ ಚಿತ್ರಕ್ಕೂ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ಕೊಟ್ಟು ಆ ಚಿತ್ರದ ನಿರ್ಮಾಪಕರಿಗೆ ತಲೆ ಬಿಸಿ ಮಾಡಿತ್ತು. ಇದೀಗ ಗೋವರ್ಧನ್ ನಿರ್ದೇಶನದ ನಿರ್ದೋಷಿ ಚಿತ್ರ ಟ್ರಿಬ್ಯುನಲ್‌ವರೆಗೆ ಹೋಗಿ ಬಂದಿದೆ. ಮೊದಲು ಈ ಚಿತ್ರದ ಶೀರ್ಷಿಕೆ ರಸಗುಲ್ಲ ಎಂದಿತ್ತು. ನಿರ್ದೇಶಕ ಗೋವರ್ಧನ್ ಚಿತ್ರದ ತುಂಬಾ ಶೃಂಗಾರ ರಸವನ್ನೇ ಹರಿಸಿದ್ದರಿಂದ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿತ್ತು ಅನ್ನಿಸುತ್ತದೆ. ಸದ್ಯದಲ್ಲೇ ಈ ಚಿತ್ರ ಬಿಡುಗಡೆಯಾಗಲಿದೆ.