ಮಾತು ಶುರುಮಾಡಿದ ಧೂಳ್
ಎಚ್ ಸುನೀಲ್ ನಿರ್ಮಿಸುತ್ತಿರುವ ಧೂಳ್ ಚಿತ್ರಕ್ಕೆ ಆಕಾಶ್ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ನಡೆಯುತ್ತಿದೆ. ದುನಿಯಾ ಚಿತ್ರದ ಮೂಲಕ ನೋಡುಗರ ಮನಗೆದ್ದ ಯೋಗೀಶ್ ಈ ಚಿತ್ರದ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಮನಸಾರೆಯ ಬೆಡಗಿ ಐಂದ್ರಿತಾ ರೇ ನಾಯಕಿ. ಲೂಸ್ ಮಾದ ಖ್ಯಾತಿಯ ಯೋಗೀಶ್ ನಾಯಕ. ಧರಣಿ ಎಂಬುವವರು ಈ ಪ್ರೇಮ ಕಥಾನಕವನ್ನು ನಿರ್ದೇಶಿಸುತ್ತಿದ್ದಾರೆ.ವಿ.ಹರಿಕೃಷ್ಣ ರಾಗ ಸಂಯೋಜನೆಯಲ್ಲಿ ಮೂಡಿ ಬಂದಿರುವ ಚಿತ್ರದ ಐದು ಹಾಡುಗಳು ಕೇಳಲು ಇಂಪಾಗಿದ್ದು, ಸದ್ಯದಲ್ಲೇ ಧ್ವನಿಸುರಳಿ ಬಿಡುಗಡೆ ಮಾಡಲಾಗುವುದಂತೆ.ದತ್ತ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಾಮ್‌ನಾರಾಯಣ್ ಸಂಭಾಷಣೆ ಬರೆದಿದ್ದಾರೆ. ಮೋಹನ್ ಅವರ ಕಲೆ ಹಾಗೂ ರವಿವರ್ಮ ಅವರ ಸಾಹಸ ಈ ಚಿತ್ರಕ್ಕಿದೆ.