ಹಿರಿಯ ನಟಿ ಬಿ.ಸರೋಜಾ ದೇವಿ ತಮ್ಮ ಆ ದಿನಗಳ ಚಿತ್ರ ಜೀವನವನ್ನು ನಮ್ಮ ಮುಂದೆ ಎಳೆಎಳೆಯಾಗಿ ಬಿಚ್ಚಿಡುತ್ತಾರೆ. ಅಂದಿನ ಕಾಲದಲ್ಲಿ ನಟಿಯರು ಚಿತ್ರೀಕರಣದ ವೇಳೆ ಸೆಟ್ ಬಿಟ್ಟು ಕದಲುತ್ತಿರಲಿಲ್ಲವಂತೆ. ನಾಯಕ ನಟರ ಮಾತಿನ ನಡುವಳಿಕೆಯ ರೀತಿ ಗಮನಿಸಿ ಅದಕ್ಕೆ ಪ್ರತಿಯಾಗಿ ಸರೋಜಾದೇವಿ ನಟಿಸುತ್ತಿದ್ದರಂತೆ. ಹಾಗಾಗಿಯೇ ಎಷ್ಟೋ ಘಟಾನುಗಟಿ ನಾಯಕ ನಟರೊಂದಿಗೆ ಅವರು ಲೀಲಾಜಾಲವಾಗಿ ನಟಿಸಿದ್ದರಂತೆ.
ಅವರ ಕಾಲದಲ್ಲಿ ಇಡೀ ಚಿತ್ರತಂಡ ಕುಳಿತು ಚಿತ್ರದ ಕಥೆ ಬಗ್ಗೆ ಚರ್ಚಿಸುತ್ತಿತ್ತಂತೆ. ಎಲ್ಲರೂ ಒಟ್ಟಿಗೆ ಇರುತ್ತಿದ್ದುದರಿಂದ, ಒಂದು ರೀತಿಯ ಬಾಂಧವ್ಯ ಮತ್ತು ಅರ್ಥಮಾಡಿಕೊಳ್ಳುವ ಮನೋಭಾವ ನಮ್ಮಲ್ಲಿ ಬೆಳೆಯುತ್ತಿತ್ತು ಎನ್ನುತ್ತಾರೆ ಅವರು. ಹಾಗಾಗಿಯೇ ಸರೋಜಾ ದೇವಿಯವರಿಗೆ 5 ದಶಕಗಳ ಕಾಲ ಅಭಿನಯಿಸಲು ಸಾದ್ಯವಾಯಿತಂತೆ.
ಈಗ ಬರುವ ನಾಯಕಿಯರು ಮನಸೋ ಇಚ್ಚೆ ಬಂದಂತೆ ನಟಿಸುತ್ತಾರೆ, ಡಬ್ಬಿಂಗ್ ಕೂಡ ಮಾಡಲು ಬರುವುದಿಲ್ಲ. ಹೀಗಾದರೆ ಅವರಿಗೆ ಬದ್ಧತೆ ಎಲ್ಲಿಂದ ಬರುತ್ತದೆ? ಎಂದು ಸರೋಜಾದೇವಿ ಪ್ರಶ್ನಿಸುತ್ತಾರೆ. ಬಹುಶಃ ಅದಕ್ಕೆ ಹೇಳೋದು ಒಲ್ಡ್ ಇಸ್ ಗೋಲ್ಡ್ ಅಂತ ಅಲ್ಲವೇ?