ಒಂದೆಡೆ ಪ್ರಜ್ವಲ್ ದೇವರಾಜ್ ಚಿತ್ರಗಳು ಮಕಾಡೆ ಮಲಗುತ್ತಿವೆ. ಅವರ ಅಭಿನಯದ ಸೂಪರ್ ಮ್ಯಾನ್ ಚಿತ್ರದ ಚಿತ್ರೀಕರಣ ಆರಂಭವಾಯಿತು ಎಂದುಕೊಳ್ಳುವಷ್ಟರಲ್ಲೇ ಮತ್ತೊಂದು ವಿವಾದ ಈ ಚಿತ್ರದ ಬೆನ್ನು ಹತ್ತಿದೆ.
ಸೂಪರ್ ಮ್ಯಾನ್ ಚಿತ್ರದ ಚಿತ್ರೀಕರಣ 2009ರ ಮಾರ್ಚ್ 6ರಂದು ಪ್ರಾರಂಭವಾಗಿತ್ತು. ಶೂಟಿಂಗ್ ವೇಳೆಯಲ್ಲಿ ನಿರ್ಮಾಪಕ ಚಂದ್ರಶೇಖರ್ ಹಾಗೂ ನಿರ್ದೇಶಕರ ನಡುವೆ ಮನಸ್ತಾಪ ಉಂಟಾಗಿ ಚಿತ್ರೀಕರಣಕ್ಕೆ ಪ್ಯಾಕಪ್ ಹೇಳಲಾಗಿತ್ತು.
ಸ್ವಲ್ಪ ದಿನಗಳಲ್ಲೇ ಇಬ್ಬರೂ ಒಂದಾಗಿ ಎರಡನೇ ಹಂತದ ಚಿತ್ರೀಕರಣ ಪ್ರಾರಂಭಿಸಿದರು. ಅದೇ ರಾಗ ಅದೇ ಹಾಡು ಎಂಬಂತೆ ಕಾದಾಡಿಕೊಂಡು ಮತ್ತೊಮ್ಮೆ ಶೂಟಿಂಗ್ ನಿಲ್ಲಿಸಲಾಯತು.
ಪ್ರಸ್ತುತ ನಿರ್ದೇಶಕರು ಮಾತ್ರ ಬದಲಾಗಿ ಚಿತ್ರೀಕರಣ ಮುಂದುವರೆದಿದೆ. ತಮಾಷೆ ಎಂದರೆ ನಿರ್ದೇಶಕರು ತಮಗೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರಂತೆ. ಮತ್ತೆ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಏನೇ ಹೇಳಿ, ಪ್ರಜ್ವಲ್ ದೇವರಾಜ್ ಗ್ರಹಚಾರ ಮಾತ್ರ ನೆಟ್ಟಗಿಲ್ಲ.