ಗೋಲ್ಡನ್ ಸ್ಟಾರ್ ಗಣೇಶ್, ತಮ್ಮ ಸ್ವಂತ ಬ್ಯಾನರಿನ ಮಳೆಯಲಿ ಜೊತೆಯಲಿ ಚಿತ್ರದಿಂದ ಸಿಕ್ಕಾಪಟ್ಟೆ ಉಬ್ಬಿ ಹೋಗಿದ್ದಾರಂತೆ. ಕಾರಣ, ಚಿತ್ರ ತೆರೆ ಕಂಡ ಹತ್ತು ದಿನಗಳಲ್ಲೇ ಹಾಕಿದ ಬಂಡವಾಳವನ್ನು ವಾಪಸ್ ತಂದುಕೊಟ್ಟಿದೆಯಂತೆ.
30 ದಿನಗಳನ್ನು ತಲುಪಿರುವ ಮಳೆಯಲಿ ಜೊತೆಯಲಿ ಚಿತ್ರ 38 ಕೇಂದ್ರಗಳಲ್ಲಿ ಜಯಭೇರಿ ಹೊಡೆಯುತ್ತಿರುವುದು ಗಣೇಶ್ ಅವರಲ್ಲಿರುವ ಅಂಕಿ ಅಂಶಗಳು. ಚಿತ್ರ ಬಿಡುಗಡೆಯಾಗಿದ್ದು 42 ಕೇಂದ್ರಗಳಲ್ಲಿ. 38 ಕೇಂದ್ರಗಳಲ್ಲಿ 30 ದಿನ ಯಶಸ್ವಿ ಪ್ರದರ್ಶನ ಕಂಡಿರುವುದು ಎಂದರೆ ಈ ಸಿನೆಮಾ ಅತ್ಯಂತ ಯಶಸ್ವೀ ಸಿನಿಮಾಗಳ ಪಟ್ಟಿಗೆ ಸೇರುತ್ತದೆ ಎಂದು ತಮ್ಮ ಚಿತ್ರಕ್ಕೆ ತಾವೇ ಸರ್ಟಿಫಿಕೆಟ್ ನೀಡುತ್ತಾರೆ ಗಣೇಶ್.
ಈ ಚಿತ್ರದ ಗೆಲುವಿಗೆ ಕಾಮಿಡಿ ಟೈಮ್ ಕಿರುತೆರೆ ಕಾರ್ಯಕ್ರಮ ಗಣೇಶ್ ಸಹಾಯ ಮಾಡಿದೆಯಂತೆ. ಇದೀಗ ಅವರ ಅಭಿನಯದ ಉಲ್ಲಾಸ ಉತ್ಸಾಹ ಚಿತ್ರ ಬಿಡುಗಡೆಗೆ ಕಾದಿದೆ. ಏನೋ ಒಂಥರಾ ಚಿತ್ರ ಚಿತ್ರೀಕರಣದ ಹಂತದಲ್ಲಿದೆ.