ಎಸ್.ಎಲ್.ಎನ್.ಸ್ವಾಮಿ ನಿರ್ದೇಶನದ ದಶಕಗಳ ನಂತರದ ಮೂಕಿ ಚಿತ್ರ ನಿರಂತರ. ಈ ಚಿತ್ರವನ್ನು ಇದೇ ತಿಂಗಳು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುತ್ತಿದ್ದು, ಚಿತ್ರದ ಪೂರ್ವಭಾವಿ ಪ್ರದರ್ಶನವನ್ನು ಇತ್ತೀಚೆಗೆ ನಗರದ ರೇಣುಕಾಂಬಾ ಪ್ರದರ್ಶನ ಮಂದಿರದಲ್ಲಿ ಏರ್ಪಡಿಸಲಾಗಿತ್ತು. ರಾಜ್ಯಪಾಲ ಡಾ.ಎಚ್.ಆರ್.ಭಾರದ್ವಾಜ್ ಈ ಚಿತ್ರವನ್ನು ವೀಕ್ಷಿಸಿ ಮುಕ್ತ ಕಂಠದಿಂದ ಹೊಗಳಿದರು.
ದಶಕಗಳ ನಂತರ ತಾವು ಚಿತ್ರವನ್ನು ವೀಕ್ಷಿಸುತ್ತಿರುವುದಾಗಿ ತಿಳಿಸಿದ ರಾಜ್ಯಪಾಲರು ಚಿತ್ರದ ಹೊಸ ಪರಿಕಲ್ಪನೆ, ಕಲಾವಿದರ ಅಭಿನಯ, ಚಿತ್ರದಲ್ಲಿ ಬಳಸಿರುವ ರಂಗಭೂಮಿಯ ಕಲ್ಪನೆ ಬಗ್ಗೆ ಸುದೀರ್ಘವಾಗಿ ಮಾತನಾಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರವನ್ನು ದುಃಖಾಂತ್ಯದ ಬದಲು ಸುಖಾಂತ್ಯ ಮಾಡಬೇಕಿತ್ತು ಎಂಬುದು ರಾಜ್ಯಪಾಲರ ತೆರೆದ ಮನದ ಅಭಿಪ್ರಾಯವಾಗಿತ್ತು.