ಯೋಗರಾಜ್ ಭಟ್ ತಾವೇ ಸ್ವತಃ ನಿರ್ಮಿಸಲು ಹೊರಟಿರುವ ತಮ್ಮ ಚಿತ್ರಕ್ಕೆ ಪಂಚರಂಗಿ ಎಂದು ನಾಮಕರಣ ಮಾಡಿದ್ದಾರೆ. ಪಂಚರಂಗಿ ಎಂದರೆ 5 ಬಣ್ಣಗಳು. ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ ಎನ್ನುತ್ತಾರೆ ಭಟ್ಟರು.
ವಿದ್ಯೆ, ಉದ್ಯೋಗ, ಪ್ರೀತಿ, ಪಾಲಕರು ಹಾಗೂ ಮದುವೆ ಎಂಬುದು ಆ ಬಣ್ಣಗಳ ಅರ್ಥವಂತೆ. ಫೆಬ್ರವರಿ ಮೂರರಿಂದ ಬಣ್ಣಗಳ ಜೋಡಣೆ ಆರಂಭವಾಗಲಿದೆ. ಉದ್ಯಾನ ನಗರಿ ಹಾಗೂ ಕರಾವಳಿ ಪ್ರದೇಶದಲ್ಲಿ ಚಿತ್ರೀಕರಣ ಅದರಲ್ಲೂ, ಮಂಗಳೂರಿನಿಂದ ಅಂಕೋಲಾದವರೆಗಿನ ರಮಣೀಯ ತಾಣಗಳಲ್ಲಿ ಶೂಟಿಂಗ್ ನಡೆಯಲಿದೆ.
MOKSHA
ದಿಗಂತ್ ಈ ಚಿತ್ರದ ನಾಯಕ ನಟ. ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದ ನಿಧಿ ಸುಬ್ಬಯ್ಯ ನಾಯಕಿ. ಇಂತಿ ನಿನ್ನ ಪ್ರೀತಿಯ ಚಿತ್ರದ ಖ್ಯಾತಿಯ ಸೋನು ಕೂಡಾ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ. ಮಳೆ ಚಿತ್ರಕ್ಕೆ ಟ್ಯೂನ್ ಹಾಕಿದ ಮನೋಮೂರ್ತಿಯವರೇ ಪಂಚರಂಗಿಗೂ ಸಂಗೀತ ನೀಡಲಿದ್ದಾರೆ. ಒಟ್ಟಾರೆ ಹಿಟ್ ತಂಡವೊಂದು ಮತ್ತೊಂದು ಚಿತ್ರಕ್ಕೆ ಸಜ್ಜಾಗುತ್ತಿದೆ.