ಇದೊಂದು ಪಕ್ಕಾ ಮಕ್ಕಳ ಚಿತ್ರ ಎಂಬುದನ್ನು ಈ ಚಿತ್ರದ ಶೀರ್ಷಿಕೆಯೇ ಹೇಳಿಬಿಡುತ್ತದೆ. ಈ ಚಿತ್ರದ ಹೆಸರು 'ಕು..ಕು..' ಅಂತ. ಕೇವಲ ಸಬ್ಸಿಡಿಗಾಗಿಯೇ ಈ ಚಿತ್ರವನ್ನು ಮಾಡಿಲ್ಲವಂತೆ. ಕಮರ್ಷಿಯಲ್ ಎಲಿಮೆಂಟ್ಸ್ ಇಟ್ಟುಕೊಂಡು ಈ ಚಿತ್ರವನ್ನು ತಯಾರಿಸಲಾಗಿದೆಯಂತೆ.
ಹನ್ಸರಾಜ್ ಈ ಚಿತ್ರದ ನಿರ್ಮಾಪಕರು. ತಮ್ಮ ಬಾಲ್ಯದಿಂದಲೂ ಚಿತ್ರದಲ್ಲಿ ನಟಿಸಬೇಕೆಂದು ಹನ್ಸ್‌ರಾಜ್ ಎಂದುಕೊಂಡಿದ್ದರಂತೆ. ಆದರೆ ಅವರ ಆಸೆ ಈಡೇರಿರಲಿಲ್ಲವಂತೆ. ಇದೀಗ ನಿರ್ಮಾಣದ ಜೊತೆಗೆ 'ಕು..ಕು..' ಚಿತ್ರದಲ್ಲಿ ಹನ್ಸರಾಜ್ ನಟಿಸುತ್ತಿದ್ದಾರೆ. ವಿಶೇಷವೆಂದರೆ ಅವರ ಪುತ್ರ ವಿಜಯ್ ಹಾಗೂ ಪುತ್ರಿ ವನಿತಾ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಉಪೇಂದ್ರ ಈ ಚಿತ್ರದ ನಿರ್ಮಾಪಕರು. ನಮ್ ಉಪ್ಪಿ ಅಂದುಕೊಂಡುಬಿಟ್ಟೀರಾ? ಖಂಡಿತಾ ಅಲ್ಲ. ಇದು ಬೇರೆ ಉಪೇಂದ್ರ. ಸಾಗರ್ ನಾಗಭೂಷಣ್ ಸಂಗೀತ ನೀಡಿದ್ದಾರೆ. ಬಹುತೇಕ ಹೊಸಬರ ತಂಡವನ್ನು ಕಟ್ಟಿಕೊಂಡು ನಿರ್ಮಿಸಿರುವ ಕು..ಕು.. ಚಿತ್ರವನ್ನು ಜನವರಿ 29ರಂದು ಬಿಡುಗಡೆ ಮಾಡಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾಗಿ ಹೇಳುತ್ತಾರೆ ನಿರ್ಮಾಪಕರು.