ಪಟ್ರೆ ಲವ್ಸ್ ಪದ್ಮ ಚಿತ್ರದ ನಾಯಕ ಅಜಿತ್ ತುಂಬಾನೇ ಸಂತೋಷದಲ್ಲಿದ್ದಾರಂತೆ. ಅದಕ್ಕೆ ಕಾರಣ ಅವರ ಹೊಸ ಚಿತ್ರ ಗುಬ್ಬಿ. ಪಟ್ರೆ ಚಿತ್ರದ ನಂತರ ಅಜಿತ್ ಅವರನ್ನು ಹಲವು ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಅದರೆ ಬಂದ ಅವಕಾಶಗಳನ್ನೆಲ್ಲಾ ಅವರು ಒಪ್ಪಿಕೊಳ್ಳಲಿಲ್ಲವೆಂದು ಅವರು ನೀಡುವ ಕಾರಣ. ಅದೇನೇ ಇರಲಿ, ಉತ್ತಮ ಕಥೆಯ ಹುಡುಕಾಟದಲ್ಲಿ ತಾನಿದ್ದೆ ಎನ್ನುವ ಅಜಿತ್‌ಗೆ ಈಗ ಉತ್ತಮ ಕಥೆ ಸಿಕ್ಕಿದೆಯಂತೆ. ಅದು ಗುಬ್ಬಿ ಚಿತ್ರ.
ಗುಬ್ಬಿ ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್ ಮತ್ತು ನಿರ್ದೇಶಕ ವಿಜಯ್. ಈ ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಇಟ್ಟುಕೊಂಡಿರುವ ಪಟ್ರೆ, ಈ ಚಿತ್ರ ತಮಗೊಂದು ಬ್ರೇಕ್ ನೀಡುತ್ತದೆ ಎನ್ನುತ್ತಾರೆ.
ಈ ಚಿತ್ರಕ್ಕೆ ಮುಂಬೈ ಮೂಲದ ರೀಮಾ ಎಂಬ ಹೊಸ ಬೆಡಗಿ ನಾಯಕಿಯಾಗಿದ್ದಾಳೆ. ಬಹುತೇಕ ಚಿತ್ರ ಮುಗಿದಿದ್ದು, ಬಿಡುಗಡೆಗೆ ಅಣಿಯಾಗುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಚಿತ್ರ ತೆರೆ ಮೇಲೆ ಮೂಡಿಬರಲಿದೆ ಎನ್ನುತ್ತಾರೆ ಅಜಿತ್.