ನಮ್ಮ ಕನ್ನಡದ ವೀರಮದಕರಿ ಅರ್ಥಾತ್ ಸುದೀಪ್ ಅವರನ್ನು ಇತ್ತೀಚೆಗೆ ಪೋಲೀಸರು ಗುರುತಿಸದೇ ಇದ್ದ ತಮಾಷೆಯ ಸಂಗತಿಯೊಂದು ಇದೀಗ ಬೆಳಕಿಗೆ ಬಂದಿದೆ. ಅದೇನಪ್ಪಾ ಅದರೆ, ಈ ಫುಲ್ ಸುದ್ದಿ ಓದಲೇ ಬೇಕು!!!
ಇತ್ತೀಚೆಗೆ ಡಾ.ವಿಷ್ಣುವರ್ಧನ್ ನಿಧನರಾದ ಸುದ್ದಿ ಬಂದದ್ದು ಕೇಳಿ ನಟ ಸುದೀಪ್, ಎದ್ದು ಬಿದ್ದು ಜಯನಗರದ ವಿಷ್ಣು ನಿವಾಸದ ಬಳಿಗೆ ಧಾವಿಸಿದ್ದರು. ಅದಾಗಲೇ ವಿಷ್ಣು ಮನೆ ಮುಂದೆ ಸಾಹಸಸಿಂಹನ ಅಭಿಮಾನಿಗಳು ಜಮಾಯಿಸಿ ಸುದೀಪ್ ಅವರಿಗೆ ವಿಷ್ಣು ಮನೆಯೊಳಗೆ ಹೋಗಲು ಸಾಧ್ಯವಾಗಲಿಲ್ಲ. ಪೊಲೀಸರಂತೂ ಜನರನ್ನು ನಿಯಂತ್ರಿಸಲು ಹರ ಸಾಹಸ ಮಾಡುತ್ತಿದ್ದರು. ತಮಾಷೆಯೆಂದರೆ ಸುದೀಪ್ ಕೂಡ ಜನರ ನಡುವೆ ಸಿಕ್ಕು ಪರದಾಡುತ್ತಿದ್ದರು.
ಪೊಲೀಸರು, ಸಾಹಸಸಿಂಹನ ಅಭಿಮಾನಿಗಳನ್ನು ತಳ್ಳುತ್ತಾ ಮತ್ತೆ ಕೆಲವರಿಗೆ ಲಾಠಿ ರುಚಿ ತೋರಿಸುತ್ತಾ ತಮ್ಮ ಕರ್ತವ್ಯ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಸುದೀಪ್ ತಳ್ಳಾಡಿಕೊಂಡು ಪೊಲೀಸ್ ಅಧಿಕಾರಿಯೊಬ್ಬರ ಬಳಿ ಬಂದು ಒಳಗೆ ಬಿಡಲು ವಿನಂತಿಸಿದರಂತೆ. ಸುತಾರಾಂ ಒಪ್ಪದ ಆ ಅಧಿಕಾರಿ ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟರಂತೆ.
ಪಟ್ಟು ಬಿಡದ ಸುದೀಪ್ ಮತ್ತೊಮ್ಮೆ ಅದೇ ಅಧಿಕಾರಿಯ ಬಳಿ ತೆರಳಿ, 'ಮುಖ ನೋಡಿ ಸ್ವಾಮಿ ನಾನು ಸುದೀಪು' ಎಂದರಂತೆ ನಮ್ಮ ಕಿಚ್ಚ. 'ಯಾವ ಸುದೀಪನಯ್ಯಾ ಹೋಗಯ್ಯ, ಮಂಡೆ ಬಿಸಿ ಮಾಡಬೇಡ' ಎಂದುಬಿಟ್ಟರಂತೆ ಆ ಅಧಿಕಾರಿ!